ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ: ವಿದ್ಯಾರ್ಥಿಗಳ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST

ದಾರಿ ತೋರಿದ ‘ಪ್ರಜಾವಾಣಿ’

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿಯಿಂದ ನೀಡಿದ ಸ್ಕಾಲರ್‌ಷಿಪ್‌, ನನಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವು ನೀಡಿತು. ಸದ್ಯಕ್ಕೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಉನ್ನತ ವ್ಯಾಸಂಗ ಮಾಡುವ ಮೂಲಕ ಕುಟುಂಬದ ಆಧಾರಸ್ತಂಭವಾಗಿ ನಿಲ್ಲುವುದು ನನ್ನ ಗುರಿ. ಅದಕ್ಕೆ ‘ಪ್ರಜಾವಾಣಿ’ ನೀಡಿದ ನೆರವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ.

-ರಕ್ಷಿತಾ ಶೆಟ್ಟಿ ಹಕ್ಕೇರಿ ಮನೆ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ

ADVERTISEMENT

ವಿದ್ಯಾರ್ಥಿಗಳ ಪಾಲಿನ ಬೆಳಕು...

‘ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ’ಯಿಂದ ನೀಡಿದ ಸ್ಕಾಲರ್‌ಷಿಪ್‌ ನನ್ನ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ನೆರವು ನೀಡಿದೆ. ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೇರಣೆ ನೀಡಿದ್ದು ಈ ಸ್ಕಾಲರ್‌ಷಿಪ್‌. ಸದ್ಯಕ್ಕೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಒಳ್ಳೆಯ ಕೆಲಸದ ಮೂಲಕ ಸಮಾಜಕ್ಕೆ  ಸೇವೆಯನ್ನು ಸಲ್ಲಿಸಲು ಬಯಸುತ್ತೇನೆ. ಸಮಸ್ಯೆಗಳಿಂದ ವ್ಯಾಸಂಗ ಮುಂದುವರಿಸಲು ಪರದಾಡುವ ವಿದ್ಯಾರ್ಥಿಗಳ ಪಾಲಿಗೆ ‘ಪ್ರಜಾವಾಣಿ’ ಸ್ಕಾಲರ್‌ಷಿಪ್‌ ನಿಜಕ್ಕೂ ಬೆಳಕಾಗಿದೆ.

ಧ್ರುವ ಎಸ್‌. ತೊಟ್ಟಂ ಬೈಲಕರೆ ರಸ್ತೆ, ಉಡುಪಿ

ಶೈಕ್ಷಣಿಕ ಅಗತ್ಯ ಪೂರೈಸಿತು...

ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಅನೇಕರು ಹೇಳುತ್ತಾರೆ. ಆದರೆ, ಅದನ್ನು ಕೃತಿರೂಪಕ್ಕೆ ತರುವವರು ಅತ್ಯಂತ ವಿರಳ. ಆದರೆ, ಅಂತಹ ಮಹತ್ಕಾರ್ಯವನ್ನು ‘ಪ್ರಜಾವಾಣಿ’ ನೀಡುವ ಸ್ಕಾಲರ್‌ಷಿಪ್‌ ಮಾಡುತ್ತಿದೆ. ಬಡತನದಿಂದಾಗಿ ಅನೇಕ ವಿದ್ಯಾರ್ಥಿಗಳು ಶಾಲೆಯ ಪ್ರವೇಶ ಶುಲ್ಕ, ಪುಸ್ತಕ ಖರೀದಿಗೂ ಪರದಾಡಬೇಕಾಗುತ್ತದೆ. ಆದರೆ, ಈ ಸ್ಕಾಲರ್‌ಷಿಪ್‌ನಿಂದ ನನಗೆ ಪಠ್ಯ ಪುಸ್ತಕ ಖರೀದಿಯಂತಹ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಯಿತು.

ಧ್ರುತಿ ಎಸ್‌. ಉಡುಪಿ

ಸಹಾಯವಾಯಿತು...

ಸದ್ಯಕ್ಕೆ ನಾನು ಕುಂದಾಪುರದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಎಸ್ಸೆಸ್ಸೆಲ್ಸಿಯ ನಂತರ ಪ್ರಥಮ ಪಿಯುಸಿ ಪ್ರವೇಶಕ್ಕೂ ಮುನ್ನ ‘ಪ್ರಜಾವಾಣಿ’ ಸ್ಕಾಲರ್‌ಷಿಪ್‌ ನೀಡುವ ಮೂಲಕ ನನಗೆ ಸಹಾಯ ಮಾಡಿತು. ಅದರ ಫಲವಾಗಿಯೇ  ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಯಿತು. ದ್ವಿತೀಯ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವ ಮೂಲಕ ಉನ್ನತ ವ್ಯಾಸಂಗ ಮಾಡುವ ಇಚ್ಛೆ ಇದೆ. ವಿದ್ಯಾರ್ಥಿಗಳ ಓದಿಗೆ ನೆರವಾಗಿ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ‘ಪ್ರಜಾವಾಣಿ’ ಕೊಡುಗೆ ನೀಡುತ್ತಿರುವುದು ಅಭಿನಂದನಾರ್ಹ.

ಅಕ್ಷತಾ ಸಿ.ಪೂಜಾರಿ ಕೋಡಿ, ಕುಂದಾಪುರ, ಉಡುಪಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.