
ಶಿಕಾರಿಪುರ: ಬರಗಾಲದಿಂದ ಕಂಗೆಟ್ಟ ರೈತರ ಕಣ್ಣೀರು ಒರೆಸಲು ಪ್ರವಾಸ ಹೋಗುತ್ತ್ದ್ದಿದೇನೆಯೇ ಹೊರತು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಸೆಗಾಗಿ ಪ್ರವಾಸ ಹೋಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಜಲಾಶಯದ ಅವರಣದಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಬೃಂದಾವನ (ಉದ್ಯಾನ) ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರಗಾಲದಿಂದ ರೈತ ಅನುಭವಿಸುತ್ತಿರುವ ದಯನೀಯ ಸ್ಥಿತಿ-ಗತಿಯನ್ನು ಸರ್ಕಾರದ ಮುಂದಿಡುವ ಕೆಲಸ ಮಾಡಲು ಬರ ಪ್ರವಾಸ ಹಮ್ಮಿಕೊಂಡಿದ್ದೇವೆ. ಈ ಕಾರ್ಯವನ್ನು ಕೆಲವು ತಿಂಗಳ ಹಿಂದೆಯೇ ಮಾಡಬೇಕಾಗಿತ್ತು. ಆದರೆ, ಕಾನೂನಿನ ಅಡ್ಡಿ ಆತಂಕಗಳಿದ್ದ ಕಾರಣ, ಅವುಗಳಿಂದ ಹೊರಬಂದು ನಾಳೆಯಿಂದ ಪ್ರವಾಸ ಹೊರಟ್ಟಿದ್ದೇನೆ ಎಂದರು.
ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 3 ವರ್ಷಗಳಲ್ಲಿ ಅನೇಕ ಷಡ್ಯಂತ್ರಗಳ ಮೂಲಕ ಯಡಿಯೂರಪ್ಪ ಅವರನ್ನು ಮುಗಿಸಲು ಕೆಲವರು ಪ್ರಯತ್ನ ಪಟ್ಟರೂ, ಅದು ಸಾಧ್ಯವಾಗಿಲ್ಲ . ಭೂಮಿ ಮೇಲಿರುವ ಯಾವುದೇ ಶಕ್ತಿಯಿಂದ ಮಾಜಿ ಮುಖ್ಯಮಂತ್ರಿ (ಬಿಎಸ್‌ವೈ)ಯ ನಾಶ ಸಾಧ್ಯವಿಲ್ಲ. ರೈತರ ಹಾಗೂ ಬಡವರ ಪರವಾದ ಆಡಳಿತ ನೀಡಲು ಯಡಿಯೂರಪ್ಪ ನಾಯಕತ್ವ ಇರಲೇಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.