ADVERTISEMENT

ಪ್ರೊ.ಎನ್‌.ಬಸವಾರಾಧ್ಯ ನಿಧನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಬೆಂಗಳೂರು: ಕನ್ನಡ  ಸಾಹಿತ್ಯ ಪರಿಷತ್‌ನ  ಮಾಜಿ ಅಧ್ಯಕ್ಷ ಪ್ರೊ.  ಎನ್‌. ಬಸವಾರಾಧ್ಯ  (88) ಶುಕ್ರವಾರ  ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಬಸವರಾಧ್ಯ ಅವರು, ಕಳೆದ ಕೆಲ ದಿನ ಗಳಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿ ದ್ದಾರೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಚಾಮರಾಜಪೇಟೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೂಲತಃ ಕೋಲಾರ ಜಿಲ್ಲೆ ಗೌರಿ ಬಿದನೂರು ತಾಲ್ಲೂಕಿನ ನಾರಸಿಂಹನ ಹಳ್ಳಿ ಗ್ರಾಮದ ಬಸವಾರಾಧ್ಯ ಅವರು, ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆ­ಸಿದ್ದರು.

ಮೈಸೂರಿನ ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ರಾಗಿ ಹಲವಾರು ಪ್ರಾಚೀನ ಕನ್ನಡ ಗ್ರಂಥ ಗಳನ್ನು ಸಂಪಾದಿಸಿರುವ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟು ಯೋಜನೆಯ ಮೊದಲ 8 ಸಂಪುಟಗಳ ಸಂಪಾದಕ­ರಾಗಿ ಕಾರ್ಯ ನಿರ್ವಹಿಸಿದ್ದರು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ಅವರು ಒಂಬತ್ತು ವರ್ಷ ಗಳ ಕಾಲ ಸೇವೆ ಸಲ್ಲಿಸಿದ್ದರು.
 
ಹಲವಾರು ಅಪ್ರಕಟಿತ ಹಳಗನ್ನಡ ಕೃತಿಗಳನ್ನು ಸಂಪಾದನೆ ಮಾಡಿ ಪ್ರಕ­ಟಣೆಗೆ ಸಿದ್ಧಪಡಿಸಿದ  ಬಸವಾರಾಧ್ಯ ಅವರು ಕನ್ನಡ ಸಾಹಿತ್ಯ ಮತ್ತು ವಿದ್ವತ್  ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ‘ಹರಿಶ್ಚಂದ್ರ ಕಾವ್ಯ’ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಅವರು ಸಂಪಾದನೆ ಮಾಡಿದ್ದಾರೆ. ಅವರು ಸಂಪಾದಿಸಿದ 17ನೇ ಶತಮಾನದ ಷಟ್ಪದಿ ಕಾವ್ಯ ‘ಪ್ರಬೋಧ ಚಂದ್ರೋದಯ’ ಇತ್ತೀಚಿಗೆ ಪ್ರಕಟವಾಯಿತು.

ರಾಜ್ಯ ಸಾಹಿತ್ಯ ಅಕಾಡೆಮಿ ಪುರ ಸ್ಕಾರ, ತೀನಂಶ್ರೀ ಸ್ಮಾರಕ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಭಾರತ ಭಾಷಾ ಭೂಷಣ ಪ್ರಶಸ್ತಿ, ದೇವರಾಜ ಬಹದ್ದೂರ್ ಸಾಹಿತ್ಯಿಕ ಸಮಿತಿ ಪುರಸ್ಕಾರಗಳು ಇವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.