ADVERTISEMENT

ಪ್ರೊ.ಎಸ್‌.ಆರ್‌.ರೋಹಿಡೇಕರ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2014, 19:30 IST
Last Updated 21 ಜನವರಿ 2014, 19:30 IST

ಬೆಂಗಳೂರು: ಹಿರಿಯ ಶಿಕ್ಷಣ ತಜ್ಞ ಪ್ರೊ.ಎಸ್‌.ಆರ್‌.­ರೋಹಿಡೇಕರ್‌ (98) ಭಾನುವಾರ ಇಲ್ಲಿ ನಿಧನರಾದರು.

ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ  ಇದ್ದಾರೆ. ಅಂತ್ಯಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ನಡೆಯಿತು.

ಮೂಲತಃ ವಿಜಾಪುರ ಜಿಲ್ಲೆಯವರಾದ ಅವರು ಹಲವು ವರ್ಷಗಳಿಂದ ನಗರದಲ್ಲಿಯೇ ವಾಸ ಮಾಡುತ್ತಿ­­­­ದ್ದರು. ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದರು.

ಅಧ್ಯಾಪಕರಿಗೆ ಚೆಕ್‌ ಮೂಲಕ ವೇತನ ವಿತರಣೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಪ್ರಗತಿಗೆ ನೀಡಿದ್ದ ಕೊಡುಗೆಗಾಗಿ  ರೋಹಿಡೇಕರ್‌ ಅವರಿಗೆ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು.

ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದ ಅವರು ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ.  ಷೇಕ್ಸ್‌ಪಿಯರ್ ಸಾನೆಟ್‌­ಗಳನ್ನು ಕನ್ನಡಕ್ಕೆ ಅನುವಾದಿ­ಸಿದ್ದಾರೆ. ಇವರ ಮಾರ್ಗದರ್ಶನದಲ್ಲಿಯೇ 7 ಮಂದಿ ಸಂಶೋಧನಾ ಪ್ರಬಂಧ ಮಂಡಿಸಿ­ದ್ದಾರೆ.  ರಾಜಾಜಿನಗರ ವಿದ್ಯಾವರ್ಧಕ ಸಂಘ, ವಿಜಯ ಎಜುಕೇಷನ್‌ ಸೊಸೈಟಿಯಲ್ಲಿಯೂ ಸಕ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.