ADVERTISEMENT

ಬಂಟ್ವಾಳ: ಫಲ್ಗುಣಿ ನದಿಯಲ್ಲಿ ಐವರು ಮಕ್ಕಳು ನೀರುಪಾಲು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 4:34 IST
Last Updated 7 ನವೆಂಬರ್ 2017, 4:34 IST
ಅರಳದಲ್ಲಿ ಜನ ದುಃಖಿತರಾಗಿರುವುದು
ಅರಳದಲ್ಲಿ ಜನ ದುಃಖಿತರಾಗಿರುವುದು   

ಬಂಟ್ವಾಳ: ತಾಲ್ಲೂಕಿನ ಅರಳ ಮುಲ್ಲರಪಟ್ನದ ಫಲ್ಗುಣಿ ನದಿಯಲ್ಲಿ ಐವರು ಮಕ್ಕಳು ನೀರುಪಾಲಾಗಿದ್ದಾರೆ.

ಮಕ್ಕಳ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆ ಹೊತ್ತಿಗೆ ಒಂದು ಮೃತದೇಹ ಪತ್ತೆಯಾಗಿದೆ.

ಮೃತರನ್ನು ಅಸ್ಲಂ, ಸವದ್, ಮುದಸ್ಸಿರ್, ರಮೀಜ್ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 17ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ.

ADVERTISEMENT

ಅಕ್ಕಪಕ್ಕದ ಮನೆಯವರಾದ ಇವರು ಸೋಮವಾರ ಸಂಜೆಯೇ ನಾಪತ್ತೆಯಾಗಿದ್ದರು. ಮಂಗಳೂರಿಗೆ ಜತೆಯಲ್ಲಿ ತೆರಳಿರಬಹುದು ಎಂದು ಮನೆ ಮಂದಿ ಭಾವಿಸಿದ್ದರು. ಆದರೆ ಇಂದು ಬೆಳಿಗ್ಗೆ ಅವರು ನೀರಲ್ಲಿ ಕೊಚ್ಚಿಹೋದುದು ಮನವರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.