
ಪ್ರಜಾವಾಣಿ ವಾರ್ತೆಹುಬ್ಬಳ್ಳಿ: ಆಶ್ರಯ ಮನೆ ಫಲಾನುಭವಿಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ನೆರೆ ಸಂತ್ರಸ್ತರಿಗಾಗಿ ಆಸರೆ ಯೋಜನೆಯಡಿ ನವಲಗುಂದ ತಾಲ್ಲೂಕಿನ ಅಮರಗೋಳದಲ್ಲಿ ನಿರ್ಮಿಸಿದ ಮನೆಗಳ ವಿತರಣೆ ಸಮಾರಂಭದ ಸಂದರ್ಭದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.‘ಆಶ್ರಯ ಮನೆಯ ಫಲಾನುವಿಗಳಿಂದ ರೂ. 2600 ಕೋಟಿ ಸಾಲ ಬಾಕಿ ಬರಬೇಕಾಗಿದೆ. ಇದರಲ್ಲಿ ರೂ. 1085 ಕೋಟಿ ಬಡ್ಡಿ ಸೇರಿಕೊಂಡಿದೆ. ಈ ಬಡ್ಡಿ ಮನ್ನಾ ಮಾಡಲು ಸರ್ಕಾರ ಆಲೋಚಿಸುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.