ADVERTISEMENT

ಬಾಬ ಅಸ್ತಂಗತ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 13:20 IST
Last Updated 24 ಏಪ್ರಿಲ್ 2011, 13:20 IST

ಬೆಂಗಳೂರು :ಸತ್ಯ ಸಾಯಿಬಾಬರವರು ಭಾನುವಾರ ಬೆಳ್ಳಗ್ಗೆ ವಿಧಿವಶರಾಗಿದ್ದು ಈ ಹಿನ್ನೆಲೆಯಲ್ಲಿ  ಗಣ್ಯರು ಪುಟ್ಟಪರ್ತಿಯ ಕಡೆಗೆ ಪ್ರಯಾಣ ಮಾಡುತ್ತಿರುವ ಬೆನ್ನೆಲೆ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ  ಶಂಕರ್ ಬಿದರಿ  ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರು ಆಂಧ್ರ ಪ್ರದೇಶದ ಪುಟ್ಟಪರ್ತಿಗೆ ಸಮೀಪದಲ್ಲಿಯೆ ಇದ್ದು  ಕೇವಲ 150ಕೀಲೊಮಿಟರ್ ಮಾತ್ರ ಇದೆ. ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲದೇ ವೈಟ್‌ಫಿಲ್ಡನಲ್ಲಿರುವ ಬಾಬರವರ ಆಶ್ರಮಕ್ಕೂ ಮತ್ತು ನಗರದಲ್ಲಿರುವ  ಅನೇಕ ಸಾಯಿಮಂದಿರಗಳಿಗೆ ಬಿಗಿಭದ್ರತೆಯನ್ನು ಮಾಡಲಾಗಿದ್ದು ಸಾಯಿ ಭಕ್ತರು ಕರ್ನಾಟಕದ ಅನೇಕ ಕಡೆ ಇದ್ದು ಅಲ್ಲಿ ಇರುವ ಸಾಯಿ ಮಂದಿರಗಳಿಗೂ ಬಿಗಿ ಭದ್ರತೆಯನ್ನು ಮಾಡಲಾಗಿದೆ ಎಂದು ಡಿ.ಜಿ.ಪಿ ಎಸ್.ಟಿ.ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.