ADVERTISEMENT

ಬಾಲಕಿ ಅತ್ಯಾಚಾರ, ಕೊಲೆ: ಗಲ್ಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:34 IST
Last Updated 28 ಏಪ್ರಿಲ್ 2018, 19:34 IST
ಅನಿಲ್‌ ಬಳಗಾರ
ಅನಿಲ್‌ ಬಳಗಾರ   

ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಅನಿಲ್‌ ಬಳಗಾರ (35) ಎಂಬಾತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ನಗರದ 54ನೇ ಸಿಸಿಎಚ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

2017ರ ಏಪ್ರಿಲ್ 20ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ, ಈ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್(ಪಿ.ಪಿ)
ಚಿನ್ನವೆಂಕಟರವಣಪ್ಪ ವಾದಿಸಿದ್ದರು.

ಪ್ರಕರಣದ ವಿವರ: ಬೆಂಗಳೂರಿನ ಗಿರಿನಗರ ಸಮೀಪದ ವೀರಭದ್ರನಗರದಲ್ಲಿ ಪೋಷಕರ ಜತೆಯಲ್ಲಿ ಬಾಲಕಿ ವಾಸವಿದ್ದಳು. ಪಕ್ಕದ ಮನೆಯಲ್ಲೇ  ಅಪರಾಧಿ ಅನಿಲ್, ತನ್ನ ಪತ್ನಿ ಜತೆಯಲ್ಲಿ ನೆಲೆಸಿದ್ದ ಎಂದು  ಪಿ.ಪಿ. ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.