ADVERTISEMENT

ಬೀದರ್‌–ಕೊಲ್ಹಾಪುರ ರೈಲು ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 14:55 IST
Last Updated 14 ಜೂನ್ 2018, 14:55 IST
ಬೀದರ್‌–ಕೊಲ್ಹಾಪುರ ರೈಲಿಗೆ ಸಂಸದ ಭಗವಂತ ಖೂಬಾ ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು.
ಬೀದರ್‌–ಕೊಲ್ಹಾಪುರ ರೈಲಿಗೆ ಸಂಸದ ಭಗವಂತ ಖೂಬಾ ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು.   

ಬೀದರ್‌: ವಾರಕ್ಕೆ ಒಂದು ಬಾರಿ ಸಂಚರಿಸಲಿರುವ ಬೀದರ್‌–ಕೊಲ್ಹಾಪುರ ರೈಲಿಗೆ ಸಂಸದ ಭಗವಂತ ಖೂಬಾ ಇಲ್ಲಿನ ರೈಲು ನಿಲ್ದಾಣದಲ್ಲಿ ಗುರುವಾರ ಹಸಿರು ನಿಶಾನೆ ತೋರಿಸಿದರು.

‘ರಾಜ್ಯದ ಗಡಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಹೊಸ ರೈಲು ಆರಂಭಿಸಲಾಗಿದ್ದು, ಒಟ್ಟು 20 ಕೋಚ್‌ಗಳಲ್ಲಿ 1,442 ಜನ ಸುಲಭವಾಗಿ ಪ್ರಯಾಣಿಸಬಹುದಾಗಿದೆ’ ಎಂದು ತಿಳಿಸಿದರು.

ರೈಲು ಪ್ರತಿ ಬುಧವಾರ (ಗಾಡಿ ಸಂಖ್ಯೆ 11416) ರಾತ್ರಿ 11.25ಕ್ಕೆ ಕೊಲ್ಹಾಪುರದಿಂದ ಹೊರಟು ಮಿರ್‌ಜ್, ಪಂಢರಪುರ, ಕುರದವಾಡಿ, ಉಸ್ಮಾನಾಬಾದ್, ಲಾತೂರ್‌, ಲಾತೂರ್ ರೋಡ್, ಉದಗಿರ, ಭಾಲ್ಕಿ ಮಾರ್ಗವಾಗಿ ಮರುದಿನ ಬೆಳಿಗ್ಗೆ 10.15ಕ್ಕೆ ಬೀದರ್ ತಲುಪಲಿದೆ.

ADVERTISEMENT

ಪ್ರತಿ ಗುರುವಾರ ಬೆಳಿಗ್ಗೆ 11.45ಕ್ಕೆ (ರೈಲು ಗಾಡಿ ಸಂಖ್ಯೆ 11415) ಬೀದರ್‌ನಿಂದ ಹೊರಟು ಭಾಲ್ಕಿ, ಉದಗಿರ, ಲಾತೂರ್‌ ರೋಡ್, ಲಾತೂರ್‌, ಉಸ್ಮಾನಾಬಾದ್, ಕುರದವಾಡಿ, ಪಂಢರಪುರ ಹಾಗೂ ಮಿರಜ್ ಮಾರ್ಗವಾಗಿ ಮಧ್ಯರಾತ್ರಿ 12.35ಕ್ಕೆ ಕೊಲ್ಹಾಪುರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.