ADVERTISEMENT

ಬುಧವಾರ ಅಂತ್ಯಕ್ರಿಯೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST

ನರಗುಂದ (ಗದಗ ಜಿಲ್ಲೆ): ಉತ್ತರಾಖಂಡ ಪ್ರವಾಹ ಸಂತ್ರಸ್ತರ ರಕ್ಷಣೆಗೆ ತೆರಳಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ತಾಲ್ಲೂಕಿನ ಜಗಾಪುರದ ಯೋಧ ಬಸವರಾಜ ಯರಗಟ್ಟಿ ಅವರ ಮೃತದೇಹ ಮಂಗಳವಾರ ಸಂಜೆ ಅಥವಾ ಬುಧವಾರ ಮುಂಜಾನೆ ಜಗಾಪುರ ತಲುಪುವ ನಿರೀಕ್ಷೆಯಿದೆ.

ಮರಣ ಪ್ರಮಾಣಪತ್ರ: `ಯೋಧ ಬಸವರಾಜ ಯರಗಟ್ಟಿ ಮೃತಪಟ್ಟ ಬಗ್ಗೆ ಎನ್‌ಡಿಆರ್‌ಎಫ್ ಅಧಿಕಾರಿಗಳು ಕಳಿಸಿದ  ಪ್ರಮಾಣಪತ್ರವನ್ನು ಚೆನ್ನೈನ ಎನ್‌ಡಿಆರ್‌ಎಫ್ ವಿಭಾಗದ ಸೇನಾಧಿಕಾರಿ ದಾಟೀಕರ್ ಅವರು  ಸೋಮವಾರ ಬಸವರಾಜ ಯರಗಟ್ಟಿ ಅವರ ಕುಟುಂಬದ ಸದಸ್ಯರಿಗೆ ನೀಡಿದ್ದಾರೆ. `ಮಂಗಳವಾರ  ಶವ ಚೆನ್ನೈ ಅಥವಾ ಬೆಂಗಳೂರಿಗೆ ಬರುತ್ತದೆ. ಅಲ್ಲಿಂದ  ರಸ್ತೆ ಮೂಲಕ ಜಗಾಪುರ ಗ್ರಾಮಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತದೆ. ಬುಧವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಅಂತಿಮ ದರ್ಶನ, ಮೆರವಣಿಗೆ ಮತ್ತು ಅಂತ್ಯಕ್ರಿಯೆ ಕುರಿತು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ' ಎಂದು ತಹಶೀಲ್ದಾರ ವಿ.ಆರ್. ಪಾಟೀಲ ತಿಳಿಸಿದ್ದಾರೆ.

ಬಸವರಾಜ ಅವರ ಶವ ಒಂದು ವಾರವಾದರೂ ಗ್ರಾಮಕ್ಕೆ ಬಂದಿಲ್ಲ. ಹೀಗಾಗಿ ಇಡೀ ಗ್ರಾಮ ಶೋಕದ ಮುಳುಗಿದ್ದು, ಖಿನ್ನತೆಗೆ ಒಳಗಾಗಿರುವ ಬಸವರಾಜ ಅವರ ತಂದೆ ತುಳಸಪ್ಪ ಮತ್ತು ಪತ್ನಿ ಯಶೋದಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.