ಬೆಂಗಳೂರು: ನಗರದ ಬೈಯ್ಯಪ್ಪನಹಳ್ಳಿಯ ಜಿ.ಎಂ ಪಾಳ್ಯದ ಮೈತ್ರಿ ಅಪಾರ್ಟ್‌ಮೆಂಟ್ ಬಳಿಯಲ್ಲಿ ಎಚ್‌ಎಎಲ್‌ಗೆ ಸೇರಿದ ಹೆಲಿಕಾಪ್ಟರ್ ಒಂದು ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಲ್ಯಾಂಡಿಂಗ್ ವೇಳೆ ದಿಡೀರ್ ಕೆಳಗೆ ಬಿದ್ದಿರುವ ಹೆಲಿಕಾಪ್ಟರ್‌ನ ಎಂಜಿನ್‌ಗೆ ಹಾನಿಯಾಗಿದ್ದು, ಪೈಲಟ್‌ಗಳಾದ ರೋಡ್ ಮತ್ತು ದಿಗ್ವಿಜಯ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಚ್‌ಎಎಲ್‌ನ ತಾಂತ್ರಿಕ ಸಿಬ್ಬಂದಿ ಹಾಗೂ ಬೈಯ್ಯಪ್ಪನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.