
ಪ್ರಜಾವಾಣಿ ವಾರ್ತೆಬೆಂಗಳೂರು: ದ.ರಾ.ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ‘ಬೇಂದ್ರೆ ಕಾವ್ಯದಲ್ಲಿರುವ ಭೂಮಿತಾಯಿಯ ತತ್ವದ ಪ್ರಸ್ತುತತೆ’ ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಬೇಕು.
ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಪಡೆದ ಪರಿಚಯ ಪತ್ರ ಹಾಗೂ ಸ್ವವಿವರ ಒಳಗೊಂಡ ಪತ್ರವನ್ನು ಲೇಖನದ ಜತೆಗೆ ಕಳುಹಿಸಲು ತಿಳಿಸಿದೆ. ವಿಜೇತರಿಗೆ ಪ್ರಥಮ (ರೂ4000), ದ್ವಿತೀಯ (ರೂ 3000) ಹಾಗೂ ತೃತೀಯ (ರೂ 2000) ಬಹುಮಾನವಿರುತ್ತದೆ.
ಲೇಖನಗಳು 2,500 ಪದಗಳ ಮಿತಿಯಲ್ಲಿರಬೇಕು. ಲೇಖನಗಳನ್ನು ಕಳಿಸಲು ಕೊನೆಯ ದಿನ ನ. 20.
ವಿಳಾಸ: ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ.ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ಅಡ್ಡ ರಸ್ತೆ, ನೇತಾಜಿ ನಗರ, ಮತ್ತೀಕೆರೆ. ದೂ: 99721 09209
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.