ADVERTISEMENT

ಭಾರಿ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆಯಾಗಿದೆ.

ದಾಬಕಾದಲ್ಲಿ 7 ಸೆ.ಮೀ. ಮಳೆಯಾಗಿದೆ. ಸವಣೂರು, ಚಿತ್ರದುರ್ಗ 5, ಶಿಗ್ಗಾವಿ, ಹಾವೇರಿ, ಲಕ್ಷ್ಮೇಶ್ವರ 4, ಕೂಕನೂರು, ಬಾದಾಮಿ, ಚಿಟಗುಪ್ಪ, ಕವಿಟಲ್, ಮಸ್ಕಿ 3, ಕುಂದಗೋಳ, ಕಾಗಿನೆಲೆ, ರೋಣ, ಗುಳೇದಗುಡ್ಡ, ಕಮಲಾಪುರ, ಗುಲ್ಬರ್ಗ, ನಾರಾಯಣಪುರ, ದೇವದುರ್ಗ, ಪಂಚನಹಳ್ಳಿ, ಶ್ರೀನಿವಾಸಪುರ, ಚಿಂತಾಮಣಿ, ಕನಕಪುರದಲ್ಲಿ ತಲಾ  ಎರಡು ಸೆ.ಮೀ.ಮಳೆಯಾಗಿದೆ.ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 40.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.