ADVERTISEMENT

ಭಾಲ್ಕಿ: ಲಘು ಭೂಕಂಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 17:02 IST
Last Updated 24 ಅಕ್ಟೋಬರ್ 2017, 17:02 IST
ಭಾಲ್ಕಿ: ಲಘು ಭೂಕಂಪ
ಭಾಲ್ಕಿ: ಲಘು ಭೂಕಂಪ   

ಭಾಲ್ಕಿ: ತಾಲ್ಲೂಕಿನ ತರನಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಸುಮಾರು 6 ರಿಂದ 7 ಸೆಕೆಂಡ್‌ ಭೂಮಿ ಕಂಪಿಸಿದ ಅನುಭವವಾಗಿದೆ. ಗೋಡೆಗಳು ಅಲುಗಾಡಿದ್ದರಿಂದ ಆತಂಕಗೊಂಡ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.

ನೆಲ ಕಂಪಿಸಿದ ಪರಿಣಾಮ ಮನೆಯ ಅಟ್ಟಣಿಗೆಯಲ್ಲಿಟ್ಟಿದ್ದ ಕೆಲ ಸಾಮಾನುಗಳು ಕೆಳಗೆ ಬಿದ್ದಿವೆ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ ಚಳಕಾಪೂರೆ ಹೇಳಿದರು.

ಗ್ರಾಮಕ್ಕೆ ತಹಶೀಲ್ದಾರ್‌ ಮನೋಹರ ಸ್ವಾಮಿ, ಡಿವೈಎಸ್ಪಿ ವಿ.ಎಸ್‌.ಪಾಟೀಲ, ಪಿಎಸ್‌ಐ ವಿಜಯಕುಮಾರ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ADVERTISEMENT

ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.