ADVERTISEMENT

ಮಂತ್ರಿ ಮಗಳಿಗೆ ಬಿ.ಕಾಂ ಓದುವಾಸೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST
ಮಂತ್ರಿ ಮಗಳಿಗೆ ಬಿ.ಕಾಂ ಓದುವಾಸೆ
ಮಂತ್ರಿ ಮಗಳಿಗೆ ಬಿ.ಕಾಂ ಓದುವಾಸೆ   

ಶಿರಸಿ :  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪುತ್ರಿ ಜಯಲಕ್ಷ್ಮಿ ಹೆಗಡೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 87.5ರಷ್ಟು ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿರುವ ಈಕೆ ಇಂಟರ್‌ನೆಟ್ ಮೂಲಕ ಫಲಿತಾಂಶ ಪಡೆದುಕೊಂಡರು.

ಸಂಖ್ಯಾಶಾಸ್ತ್ರ (98), ಅಕೌಂಟೆನ್ಸಿ (97), ಬಿಜಿನೆಸ್ ಸ್ಟಡೀಸ್ (91), ಅರ್ಥಶಾಸ್ತ್ರ (70), ಸಂಸ್ಕೃತ (94), ಇಂಗ್ಲೀಷ್ (75) ಸೇರಿ ಒಟ್ಟು 525 ಅಂಕ ಗಳಿಸಿದ್ದಾಳೆ.ಶಿರಸಿಯಿಂದ 8 ಕಿ.ಮೀ ದೂರದ ಕಾಗೇರಿ ಹಳ್ಳಿಯಿಂದ ನಿತ್ಯ ಇಲ್ಲಿನ ಎಂ.ಇ. ಎಸ್. ಪದವಿಪೂರ್ವ ಕಾಲೇಜಿಗೆ ಬರುತ್ತಿದ್ದ ಜಯಲಕ್ಷ್ಮಿ, `ನನಗೆ ನಿರೀಕ್ಷಿಸಿದಷ್ಟೇ ಅಂಕ ಬಂದಿದೆ. ಅರ್ಥಶಾಸ್ತ್ರ ವಿಷಯದಲ್ಲಿ ಮಾತ್ರ ಸ್ವಲ್ಪ ಹೆಚ್ಚಿನ ಅಂಕ ನಿರೀಕ್ಷಿಸಿದ್ದೆ.

ಇಂಟರ್‌ನೆಟ್‌ನಲ್ಲಿ ಫಲಿತಾಂಶ ನೋಡಿ ಅಪ್ಪನಿಗೆ ತಿಳಿಸಿದೆ. ಅಪ್ಪ ಶುಭಾಶಯ ಹೇಳಿದರು~ ಎಂದು `ಪ್ರಜಾವಾಣಿ~ ಜೊತೆ ಸಂತಸ ಹಂಚಿಕೊಂಡರು. ಮುಂದೆ ಬಿ.ಕಾಂ. ಪದವಿ ಓದುವ ಆಸೆಯನ್ನು  ಜಯಲಕ್ಷ್ಮಿ ಹೊಂದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.