ADVERTISEMENT

ಮತೀಯ ಧ್ರುವೀಕರಣವೇ ಕರಾವಳಿಯಲ್ಲಿ ಕೊಲೆಗಳಿಗೆ ಕಾರಣ: ಪಿ.ಚಿದಂಬರಂ

ಆರ್‌ಎಸ್‌ಎಸ್‌, ಬಿಜೆಪಿಯಿಂದ ದ್ವೇಷ ಬಿತ್ತುವ ಕೆಲಸ

​ಪ್ರಜಾವಾಣಿ ವಾರ್ತೆ
Published 9 ಮೇ 2018, 7:41 IST
Last Updated 9 ಮೇ 2018, 7:41 IST
ಮತೀಯ ಧ್ರುವೀಕರಣವೇ ಕರಾವಳಿಯಲ್ಲಿ ಕೊಲೆಗಳಿಗೆ ಕಾರಣ: ಪಿ.ಚಿದಂಬರಂ
ಮತೀಯ ಧ್ರುವೀಕರಣವೇ ಕರಾವಳಿಯಲ್ಲಿ ಕೊಲೆಗಳಿಗೆ ಕಾರಣ: ಪಿ.ಚಿದಂಬರಂ   

ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆರ್‌ಎಸ್ಎಸ್‌ ಮತ್ತು ಬಿಜೆಪಿ ನಡೆಸುತ್ತಿರುವ ‌ಮತೀಯ ಧ್ರುವೀಕರಣವೇ ಕೊಲೆಗಳಿಗೆ ಕಾರಣವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕರಾವಳಿಯಲ್ಲಿ ಧರ್ಮದ ಆಧಾರದಲ್ಲಿ ಧ್ರುವೀಕರಣ ಮಾಡಿ, ಮತೀಯ ದ್ವೇಷ ಬಿತ್ತುವ ಕೆಲಸ ಆರ್‌ಎಸ್ಎಸ್‌ ಮತ್ತು ಬಿಜೆಪಿಯಿಂದ ನಡೆಯುತ್ತಿದೆ. ಅದು ವಿಭಿನ್ನ ಧರ್ಮದ ಜನರ ನಡುವೆ ಘರ್ಷಣೆಗೆ ಕಾರಣವಾಗಿ ಕೊಲೆಗಳಿಗೆ ದಾರಿ ಮಾಡುತ್ತಿದೆ' ಎಂದರು.

ಮತೀಯ ಧ್ರುವೀಕರಣ ಮಾಡಲು ಯತ್ನಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ‌ ಜರುಗಿಸಬೇಕು.‌ ಇದಕ್ಕೆ ಯಾರ ಅಪ್ಪಣೆಗೂ ಕಾಯಬೇಕಿಲ್ಲ. ಮತೀಯ ಧ್ರುವೀಕರಣ ತಡೆಯದಿದ್ದರೆ ಅಪಾಯ ಕಾದಿದೆ ಎಂದು ಹೇಳಿದರು.

ADVERTISEMENT

ದೇಶದಲ್ಲಿ ನರೇಂದ್ರ ಮೋದಿ ಅಲೆ‌ ಇಲ್ಲ. 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಅಲೆ ಇತ್ತು. ಈಗ ಎಲ್ಲಿಯೂ ಮೋದಿ ಅಲೆ ಇಲ್ಲ. ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಸೋತಿದೆ. ಕರ್ನಾಟಕದಲ್ಲೂ ಸೋಲು ಖಚಿತ ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ತಾವು ಪ್ರಧಾನಿ ಆಗುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಕಾಂಗ್ರೆಸ್ ಬಹುಮತ ಪಡೆದಾಗ ಪ್ರಧಾನಿ ಯಾರು ಆಗುತ್ತಾರೆ ಎಂಬುದನ್ನು ಕಾಂಗ್ರೆಸ್ ಪಕ್ಷ ನಿರ್ಧರಿಸುತ್ತದೆ. ಮೋದಿ ನಿರ್ಧರಿಸಲು ಆಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.