ADVERTISEMENT

ಮನಸೂರೆಗೊಂಡ ‘ಎತ್ತಿನಗಾಡಿ ಎಳೆಯುವ ಸ್ಪರ್ಧೆ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 19:13 IST
Last Updated 25 ಮಾರ್ಚ್ 2014, 19:13 IST
ಮದ್ದೂರು ತಾಲ್ಲೂಕು ಬೆಳತೂರು ಗ್ರಾಮದಲ್ಲಿ ಮಂಗಳವಾರ ಆಬಲವಾಡಿ ರಾಹುಲ್‌ ದ್ರಾವಿಡ್‌ ಕ್ರೀಡಾ ಬಳಗ  ಆಯೋಜಿಸಿದ್ದ ‘ಎತ್ತಿನಗಾಡಿ ಎಳೆಯುವ ಸ್ಪರ್ಧೆ’ಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡರು
ಮದ್ದೂರು ತಾಲ್ಲೂಕು ಬೆಳತೂರು ಗ್ರಾಮದಲ್ಲಿ ಮಂಗಳವಾರ ಆಬಲವಾಡಿ ರಾಹುಲ್‌ ದ್ರಾವಿಡ್‌ ಕ್ರೀಡಾ ಬಳಗ ಆಯೋಜಿಸಿದ್ದ ‘ಎತ್ತಿನಗಾಡಿ ಎಳೆಯುವ ಸ್ಪರ್ಧೆ’ಯಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡರು   

ಮದ್ದೂರು: ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ ಮಂಗಳವಾರ ಆಬಲ­ವಾಡಿಯ ರಾಹುಲ್ ದ್ರಾವಿಡ್ ಕ್ರೀಡಾಬಳಗದ ವತಿಯಿಂದ ‘ಎತ್ತಿನ­ಗಾಡಿ ಎಳೆಯುವ ಸ್ಪರ್ಧೆ’ ಸಂಭ್ರಮ­ದಿಂದ ನಡೆಯಿತು.

ಬಿ.ಎಚ್. ಮಂಗೇಗೌಡ ಪ್ರಥಮ­ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 

ರಾಹುಲ್ ದ್ರಾವಿಡ್ ಕ್ರೀಡಾ ಬಳಗದ ಅಧ್ಯಕ್ಷ ಅನಿಲ್‌ಕುಮಾರ್‌ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಇಂದು ಆಧು­ನಿಕ ಕ್ರೀಡೆಗಳ ಗುಂಗಿನಲ್ಲಿ ಶಕ್ತಿ ಪ್ರದರ್ಶ­ನದ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಜನ­ರಲ್ಲಿ ಅಡಗಿರುವ ಕ್ರೀಡಾಪ್ರತಿಭೆ­ಯನ್ನು ಹೊರತರುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳನ್ನು ಬಳಗದ ವತಿಯಿಂದ ಆಯೋಜಿಸಲಾಗುತ್ತಿದೆ’ ಎಂದರು.

ಶಿಬಿರಾಧಿಕಾರಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷ್‌ ವಿಜೇತರಿಗೆ ಬಹುಮಾನ ವಿತರಿಸಿ­ದರು. ಉಪನ್ಯಾಸಕರಾದ ಸಿದ್ದರಾಜು, ಶಿವಕುಮಾರ್‌ ಸೇರಿದಂತೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಹಾಜರಿದ್ದರು.

ವಿಜೇತರ ವಿವರ: ವಿದ್ಯಾರ್ಥಿ ವಿಭಾಗ- – ಅಭಿಷೇಕ್ ಗೌಡ  ಮತ್ತು ಶಿವರಾಜು,(ಪ್ರಥಮ), ಪಿ. ವೆಂಕಟೇಶ್ ಹಾಗೂ ಕೆ.ಪಿ. ಸಾಧನ್ (ದ್ವಿತೀಯ). ಗ್ರಾಮಸ್ಥರ ವಿಭಾಗ: ಟಿ.ಎಸ್. ಶಿವರಾಜು ಮತ್ತು ಬಿ.ಟಿ. ನವೀನ್(ಪ್ರಥಮ), ಸಾಗರ್ ಕುಮಾರ್ ಹಾಗೂ ಶಿವಾನಂದ (ದ್ವಿತೀಯ) ಬಹುಮಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.