ADVERTISEMENT

‘ಮಲಬಾರ್ ಪ್ರವಾಸಿ ವಲಯ’ ರಚನೆ; ಕೇರಳ ಪ್ರವಾಸೋದ್ಯಮ ಇಲಾಖೆಯ ಸಿದ್ಧತೆ

ಕೊಡಗು, ಮೈಸೂರು ಪ್ರವಾಸಿ ತಾಣ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 12:11 IST
Last Updated 11 ಫೆಬ್ರುವರಿ 2019, 12:11 IST
ಕೇರಳದ ಕಣ್ಣೂರಿನ ಉತ್ತರ ಮಲಬಾರ್ ಚೇಂಬರ್ ಆಫ್‌ ಕಾಮಸ್೯ ವತಿಯಿಂದ ಈಚೆಗೆ ನಡೆದ ಮಲಬಾರ್ ಪ್ರವಾಸೋದ್ಯಮ ವಿಚಾರ ಸಂಕಿರಣದಲ್ಲಿ ಕಣ್ಣೂರು ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ನಿದೇ೯ಶಕ ವಿ. ತುಳಸೀದಾಸ್ ಮಾತನಾಡಿದರು
ಕೇರಳದ ಕಣ್ಣೂರಿನ ಉತ್ತರ ಮಲಬಾರ್ ಚೇಂಬರ್ ಆಫ್‌ ಕಾಮಸ್೯ ವತಿಯಿಂದ ಈಚೆಗೆ ನಡೆದ ಮಲಬಾರ್ ಪ್ರವಾಸೋದ್ಯಮ ವಿಚಾರ ಸಂಕಿರಣದಲ್ಲಿ ಕಣ್ಣೂರು ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ನಿದೇ೯ಶಕ ವಿ. ತುಳಸೀದಾಸ್ ಮಾತನಾಡಿದರು   

ಮಡಿಕೇರಿ: ‘ಕೇರಳದ ಪ್ರವಾಸೋದ್ಯಮ ಇಲಾಖೆಯು ಸಿದ್ಧಪಡಿಸಿರುವ ಮಲಬಾರ್‌ ಪ್ರವಾಸೋದ್ಯಮ ವಲಯದ ಮೂಲಕ ಕೊಡಗು ಜಿಲ್ಲೆಯೂ ಸೇರಿದಂತೆ ಕೇರಳದ ಕಣ್ಣೂರು, ಮೈಸೂರು, ಬೇಕಲ್ ವ್ಯಾಪ್ತಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಕಣ್ಣೂರು ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸೀದಾಸ್‌ ಮಾಹಿತಿ ನೀಡಿದರು.

ಕಣ್ಣೂರಿನಲ್ಲಿ ಉತ್ತರ ಮಲಬಾರ್ ಚೇಂಬರ್ ಆಫ್ ಕಾಮಸ್೯ ವತಿಯಿಂದ ಈಚೆಗೆ ಆಯೋಜಿಸಿದ್ದ ಮಲಬಾರ್ ಪ್ರವಾಸೋದ್ಯಮ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕೊಡಗಿಗೆ ಪ್ರತ್ಯೇಕ ಮಳಿಗೆ ಕಲ್ಪಿಸಲಾಗುವುದು. ವಿಮಾನ ನಿಲ್ದಾಣ ಪ್ರಾರಂಭವಾದ ದಿನದಿಂದಲೂ ಕೊಡಗೂ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮ, ಆಥಿ೯ಕ ಚಟುವಟಿಕೆಗಳು ಚೇತರಿಕೆ ಆಗಲಿವೆ’ ಎಂದು ಹೇಳಿದರು.

ADVERTISEMENT

‘ಮುಂದಿನ ತಿಂಗಳಲ್ಲಿ ಅನೇಕ ದೇಶಗಳಿಗೆ ಕಣ್ಣೂರಿನಿಂದ ಹೊಸ ವಿಮಾನ ಯಾನ ಸಂಪಕ೯ ಲಭ್ಯವಾಗಲಿದೆ’ ಎಂದು ತುಳಸೀದಾಸ್‌ ಹೇಳಿದರು.

‘ಮಲಬಾರ್ ವ್ಯಾಪ್ತಿಯ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಯೋಜನೆ ಜಾರಿಗೊಳ್ಳಲಿದೆ. ಈ ವ್ಯಾಪ್ತಿಯ ಕಲಾವಿದರಿಗೂ ಸಂಸ್ಕೃತಿ ಬಿಂಬಿಸುವ ಚಿತ್ರಕಲೆಗೆ ಸೂಕ್ತ ಅವಕಾಶವನ್ನು ವಿಮಾನ ನಿಲ್ದಾಣದಲ್ಲಿ ಮಾಡಿಕೊಡಲಾಗುತ್ತದೆ’ ಎಂದೂ ಹೇಳಿದರು.

‘ಕೇರಳ ಕೈಗಾರಿಕಾ ಮೂಲಸೌಕಯ೯ ಅಭಿವೃದ್ಧಿಗೆ ನಿಗಮವು ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಐದು ಸಾವಿರ ಎಕರೆ ಭೂಮಿಯನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಕೇರಳ–ಕನಾ೯ಟಕದ ಉದ್ಯಮಿಗಳು ಬಳಸಿಕೊಳ್ಳಬಹುದು’ ಎಂದು ಕೋರಿದರು.

ಕೊಡಗು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ‘ಅಸೋಸಿಯೇಷನ್ ವತಿಯಿಂದ ಮಲಬಾರ್ ಪ್ರವಾಸಿ ವಲಯ ಯೋಜನೆಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಕನಾ೯ಟಕದಿಂದ ಕೇರಳಕ್ಕೆ ಬರುವ ಟೆಂಪೊ ಟ್ರಾವಲರ್ (ಟಿ.ಟಿ) ಸೇರಿದಂತೆ ಹೆಲವು ವಿಧದ ಬಾಡಿಗೆ ವಾಹನಗಳಿಗೆ ತೆರಿಗೆ ದುಬಾರಿಯಾಗಿದೆ. ಹೀಗಾಗಿ, ಕಣ್ಣೂರು ವಿಮಾನ ನಿಲ್ದಾಣಕ್ಕೂ ತೊಡಕಾಗುವ ಸಾಧ್ಯತೆಯಿದೆ. ಅದನ್ನು ಕಡಿಮೆ ಮಾಡಬೇಕು’ ಎಂದು ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಹೇಳಿದರು.

‘ಕಣ್ಣೂರು ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳ ಪ್ರಯಾಣ ದರ ಇತರ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ದುಬಾರಿಯಾಗಿದೆ. ಅದನ್ನು ಕಡಿತ ಮಾಡಿದರೆ ಪ್ರಯಾಣಿಕರಿಗೆ ಅನುಕೂಲ’ ಎಂದೂ ಚಿದ್ವಿಲಾಸ್ ಹೇಳಿದರು.

ಅದಕ್ಕೆ ತುಳಸೀದಾಸ್ ಪ್ರತಿಕ್ರಿಯಿಸಿ, ‘ವಾಹನ ತೆರಿಗೆ ವಿಚಾರದಲ್ಲಿ ಕನಾ೯ಟಕ ಮತ್ತು ಕೇರಳ ರಾಜ್ಯಗಳ ಸಾರಿಗೆ ಸಚಿವರು ಒಮ್ಮತದ ನಿಧಾ೯ರಕ್ಕೆ ಬರಬೇಕು. ಮತ್ತಷ್ಟು ಹೆಚ್ಚಿನ ವಿಮಾನಗಳು ಹಾರಾಟ ಆರಂಭಿಸಿದಾಗ ಪ್ರಯಾಣ ದರವೂ ಕಡಿಮೆ ಆಗಲಿದೆ. ದರ ನಿಗದಿ ಆಯಾ ವಿಮಾನ ಸಂಸ್ಥೆಗಳಿಗೆ ಸಂಬಂಧಿಸಿದ್ದು’ ಎಂದು ಹೇಳಿದರು.

‘ಮೈಸೂರು ಪಾರಂಪರಿಕ ನಗರವಾಗಿದೆ. ವೈನಾಡು ಪ್ರದೇಶವು ಮಳೆಯ ಕಾಡುಗಳಿಗೆ ಜನಪ್ರಿಯವಾಗಿದೆ. ಬೇಕಲ್ ಕೋಟೆಯೂ ವಿದೇಶಿ ಪ್ರವಾಸಿಗರನ್ನು ಆಕಷಿ೯ಸುವ ಸಾಮಥ್ಯ೯ ಹೊಂದಿದೆ. ಅಂತೆಯೇ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರು ಕೇವಲ ₹ 1,200 ಪ್ರಯಾಣ ದರದಲ್ಲಿ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಮಲಬಾರ್ ಪ್ರವಾಸಿ ವಲಯಕ್ಕೆ ಬರಲು ಸಾಧ್ಯವಿದೆ’ ಎಂದು ಕೇರಳ ಟ್ರಾವಲ್ ಮಾಟ್೯ ಸೊಸೈಟಿ ಅಧ್ಯಕ್ಷ ಬೇಬಿ ಮ್ಯಾಥ್ಯು ವಿವರಿಸಿದರು.

ಉತ್ತರ ಮಲಬಾರ್ ಚೇಂಬರ್ ಆಫ್ ಕಾಮಸ್೯ ಮಾಜಿ ಅಧ್ಯಕ್ಷ ಸಿ.ವಿ.ದೀಪಕ್ ಮಾತನಾಡಿ, ‘ಮಲಬಾರ್ ಪ್ರವಾಸಿ ವಲಯದ ಕಣ್ಣೂರು, ಕೊಡಗು, ಬೇಕಲ್, ವೈನಾಡ್ ಮತ್ತು ಮೈಸೂರಿಗೆ ಸೂಕ್ತ ರೀತಿಯಲ್ಲಿ ಪ್ರವಾಸಿ ಪ್ಯಾಕೇಜ್ ರೂಪುಗೊಳ್ಳಬೇಕು. ಈ ಜಿಲ್ಲೆಗಳ ಹೋಟೆಲ್‌, ಚೇಂಬರ್ ಸಂಘಟನೆಗಳ ಪ್ರಮುಖರು ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರವಾಸಿ ಪ್ಯಾಕೇಜ್ ರೂಪಿಸಬೇಕಾಗಿದೆ’ ಎಂದು ಹೇಳಿದರು.

ಕೇರಳ ಪ್ರವಾಸೋದ್ಯಮ ಇಲಾಖೆ ಕಾಯ೯ದಶಿ೯ ರಾಣಿ ಜಾಜ್೯, ಕೊಡಗು ಹೋಟೆಲ್‌, ರೆಸಾಟ್೯ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್ ಪ್ರಧಾನ ಕಾಯ೯ದಶಿ೯ ನಾಸೀರ್, ಖಚಾಂಚಿ ಭಾಸ್ಕರ್, ಗೌರವ ಸಲಹೆಗಾರ ಎಚ್‌.ಟಿ.ಅನಿಲ್, ಟ್ರಾವಲ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಕಾಯ೯ದಶಿ೯ ವಸಂತ್, ಚೇಂಬರ್ ಆಫ್ ಕಾಮಸ್೯ ಪ್ರಧಾನ ಕಾಯ೯ದಶಿ೯ ಮೋಂತಿ ಗಣೇಶ್, ನಿದೇ೯ಶಕ ಅಂಬೆಕಲ್ ನವೀನ್ ಕುಶಾಲಪ್ಪ, ನಿದೇ೯ಶಕರಾದ ಮೋಹನ್‌ದಾಸ್, ಕೋಠಿ, ಸಿದ್ದು, ಬಷೀರ್, ದಿನೇಶ್ ಕಾಯ೯ಪ್ಪ, ಮಂಜುನಾಥ್ ಬೇರೇರ, ಕುಶಾಲನಗರದ ಬಷೀರ್, ಶಜಿಲ್, ಅಂಜನ್ ಪ್ರಸಾದ್ ಇದ್ದರು.

**

ಮಲಬಾರ್ ಪ್ರವಾಸೋದ್ಯಮ ವ್ಯಾಪ್ತಿಯ ಜಿಲ್ಲೆಗಳಿಗೆ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸುಸಜ್ಜಿತ ಕೊಠಡಿಗಳು ಅಗತ್ಯವಿದ್ದು ಹೋಟೆಲ್‌, ಲಾಡ್ಜ್, ರೆಸಾಟ್೯ ಮಾಲೀಕರು ಚಿಂತನೆ ನಡೆಸಬೇಕು.
– ವಿ. ತುಳಸೀದಾಸ್‌, ಪ್ರಧಾನ ವ್ಯವಸ್ಥಾಪಕ, ಕಣ್ಣೂರು ವಿಮಾನ ನಿಲ್ದಾಣ, ಕೇರಳ

**

ಮಲಬಾರ್‌ ಪ್ರವಾಸಿ ವಲಯವು ಕಣ್ಣೂರು, ಕೊಡಗು ಜಿಲ್ಲೆಗಳ ಆಥಿ೯ಕ ಬೆಳವಣಿಗೆಗೆ ಪೂರಕ. ಪ್ರಕೃತಿ, ಜೀವ ವೈವಿಧ್ಯಕ್ಕೆ ಹಾನಿಯಾಗದಂತೆ ನಿಸಗ೯ ಸ್ನೇಹಿ, ಸುಸ್ಥಿರ ಪ್ರವಾಸೋದ್ಯಮದತ್ತ ಮಲಬಾರ್ ಪ್ರವಾಸೋದ್ಯಮ ಆದ್ಯತೆ ನೀಡುತ್ತದೆ.
– ಸಿ.ವಿ.ದೀಪಕ್‌, ಮಾಜಿ ಅಧ್ಯಕ್ಷ, ಉತ್ತರ ಮಲಬಾರ್ ಚೇಂಬರ್ ಆಫ್ ಕಾಮಸ್೯

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.