ADVERTISEMENT

ಮಹಾಮಸ್ತಕಾಭಿಷೇಕ ಪ್ರಭಾವನಾ ರಥಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಶನಿವಾರ ಪ್ರಭಾವನಾ ರಥಯಾತ್ರೆಗೆ  ಸಚಿವ ಎ.ಮಂಜು ಚಾಲನೆ ನೀಡಿದರು. ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದಾರೆ
ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಶನಿವಾರ ಪ್ರಭಾವನಾ ರಥಯಾತ್ರೆಗೆ ಸಚಿವ ಎ.ಮಂಜು ಚಾಲನೆ ನೀಡಿದರು. ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದಾರೆ   

ಶ್ರವಣಬೆಳಗೊಳ: ಇಲ್ಲಿ 2018ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ ಏರ್ಪಡಿರುವ ‘ಪ್ರಭಾವನಾ’ ರಥಯಾತ್ರೆ ಶನಿವಾರ ಆರಂಭವಾಯಿತು.

ರಥಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, 2018ರ ಜನವರಿಗೆ ಕ್ಷೇತ್ರಕ್ಕೆ ಮರಳಲಿದೆ. ಪ್ರಭಾವನಾ ರಥದಲ್ಲಿ ಬಾಹುಬಲಿ, ಗುಳ್ಳುಕಾಯಜ್ಜಿ, ಯಕ್ಷ ಯಕ್ಷಿಯರರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ರಥಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಜೈನಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಬಾಹುಬಲಿಯ ಜೀವನ ಇತಿಹಾಸ ಮತ್ತು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ’ ಸಂದೇಶವನ್ನು ರಾಜ್ಯದ ಎಲ್ಲಾ ನಗರ ಮತ್ತು ಗ್ರಾಮಗಳಿಗೆ  ತಲುಪಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.

ADVERTISEMENT

ಮಹಾಮಸ್ತಕಾಭಿಷೇಕ ನಡೆಸಿಕೊಂಡು ಬಂದಿರುವ ಪರಂಪರೆಯ ಅಂಗವಾಗಿ ಧರ್ಮ ಜಾಗೃತಿ, ನೈತಿಕ ಉತ್ಥಾನ ಹಾಗೂ ಸಂಸ್ಕೃತಿ ಸಂರಕ್ಷಣೆಗಾಗಿ ರಥಯಾತ್ರೆ ನಡೆಯಲಿದೆ. 88ನೇ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಲು ಎಲ್ಲಾ ಜನರಿಗೆ ಆಹ್ವಾನ ನೀಡುವುದೂ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.