ADVERTISEMENT

ಮಹಿಳೆ ತಲ್ಲಣಕ್ಕೆ ಜಾನಪದ ಕೈಗನ್ನಡಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 20:10 IST
Last Updated 2 ಏಪ್ರಿಲ್ 2011, 20:10 IST

ನೆಲಮಂಗಲ: ಮಹಿಳೆಯ ನೋವು, ನಲಿವು, ತಲ್ಲಣಗಳು ಜನಪದ ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಕವಯತ್ರಿ ಎಚ್.ಎಲ್.ಪುಷ್ಪಾ ಹೇಳಿದರು.
ಸ್ಥಳೀಯ ಜಾಗೃತಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು ಲೋಹಿತ್ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಮಹಿಳಾ ಜಾನಪದೋತ್ಸವ-2011 ಸಮಾರಂಭದಲ್ಲಿ ‘ಮಹಿಳಾ ಜ್ಯೋತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬದುಕಿನ ಅನುಭವದಿಂದ ಹುಟ್ಟಿದ ಜನಪದ ಸಾಹಿತ್ಯದಲ್ಲಿ ಮಹಿಳೆಯರ ಆಶಯಗಳು ಸಹ ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು.
ಶಾಸಕ ಎಸ್.ಮುನಿರಾಜು, ಮಾದರ ಚನ್ನಯ ಗುರುಪೀಠದ ಮಾದರ ಚನ್ನಯ್ಯ ಸ್ವಾಮೀಜಿ, ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಸಂಘಟನೆ ಮತ್ತು ಮಹಿಳೆಯರ ಮಹತ್ವ ಕುರಿತಾಗಿ ಜಿ.ಪಂ.ಸದಸ್ಯ ಎಚ್.ಪಿ.ಚೆಲುವರಾಜು, ಪ್ರೇರಣಾ ವಿವಿದೋದ್ದೇಶ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.
ಡಿವೈಎಸ್ಪಿ ಚಿನ್ನಸ್ವಾಮಿ, ತಾ.ಪಂ. ಉಪಾಧ್ಯಕ್ಷೆ ಅಶ್ವತ್ಥಮ್ಮ, ತಾ.ಪಂ. ಸದಸ್ಯ ವೀರಯ್ಯ, ಗ್ರಾ.ಪಂ.ಸದಸ್ಯರಾದ ಎಚ್.ಬೈಲಪ್ಪ, ವಸಂತಲಕ್ಷ್ಮಿ ರಂಗನಾಥ್, ಔಟ್‌ರೀಚ್ ಸಂಸ್ಥೆಯ ಎನ್.ಎಸ್.ಜಯಣ್ಣ, ‘ಸಾಕ್ಷರ ಭಾರತ್’ದ ಸುದರ್ಶನ್ ವೇದಿಕೆಯಲ್ಲಿ ಇದ್ದರು. 

ವಿವಿಧ ಸ್ಪರ್ಧೆಗಳ ವಿಜೇತರಿಗೆ ಜಾಗೃತಿ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಭಾಸ್ಕರ್‌ಪ್ರಸಾದ್ ಬಹುಮಾನವನ್ನು ವಿತರಿಸಿದರು.
 ತಾಲ್ಲೂಕಿನ ಎಲ್ಲ ಗ್ರಾ.ಪಂ. ಮಹಿಳಾ ಅಧ್ಯಕ್ಷರನ್ನು ಮತ್ತು ಪ್ರಮುಖ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಎಂ.ನಾಗರಾಜು ಅವರು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.