ADVERTISEMENT

ಮೀಸಲಾತಿ ಜಮಾನ ಕೊನೆ: ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ‘ಮೀಸಲಾತಿ ಜಮಾನ ಕೊನೆಗೊಂಡಿದ್ದು, ಮೀಸಲಾತಿ ಅಥವಾ ಪ್ರಮಾಣ ಪತ್ರಗಳು ವಿದ್ಯಾರ್ಥಿಯ ಬದುಕಿನಲ್ಲಿ ಗೆಲುವು ತಂದುಕೊಡಲಾರವು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

‘ಬದುಕಿನ ಯಶಸ್ಸಿಗೆ ಪರಿಶ್ರಮ ಅಗತ್ಯ. ಉದ್ಯೋಗಕ್ಕೆ ಪ್ರಮಾಣ ಪತ್ರವೊಂದೇ ಮಾನದಂಡವಾಗಿದ್ದ ಕಾಲದಲ್ಲಿ ಅದರ ದಂಧೆ ನಡೆಯಿತು. ಅದರೊಂದಿಗೆ ಕೌಶಲ ಕೂಡ ಅಗತ್ಯವಾದಾಗ ಸ್ಪರ್ಧಾ ಜಗತ್ತಿನ ಚಿತ್ರಣ ಬದಲಾಗಿದೆ. ಪರಿಶ್ರಮ ಈಗ ಮಹತ್ವದ ಸ್ಥಾನ ಪಡೆದಿದೆ. ರಕ್ತ ಚೆಲ್ಲದೆ ಯುದ್ಧದಲ್ಲಿ ಗೆಲುವು ಹೇಗೆ ಸಾಧ್ಯವಿಲ್ಲವೋ, ಪರಿಶ್ರಮ ಇಲ್ಲದೆ ಬದುಕಿನ ಯುದ್ಧ ಗೆಲ್ಲಲಾಗದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.