ADVERTISEMENT

ಮುಕ್ತ ವಿ.ವಿಯಿಂದ ಆನ್‌ಲೈನ್ ಎಂಬಿಎ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST
ಮುಕ್ತ ವಿ.ವಿಯಿಂದ ಆನ್‌ಲೈನ್ ಎಂಬಿಎ
ಮುಕ್ತ ವಿ.ವಿಯಿಂದ ಆನ್‌ಲೈನ್ ಎಂಬಿಎ   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (ಕೆಎಸ್‌ಓಯು) ಪ್ರಸಕ್ತ ಸಾಲಿನಿಂದ ಆನ್‌ಲೈನ್ ಎಂಬಿಎ ಕೋರ್ಸ್ ಆರಂಭಿಸಿದೆ.

ದೇಶದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ವೃತ್ತಿನಿರತ ಅಭ್ಯರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕೋರ್ಸ್ ಆರಂಭಿಸಲಾಗಿದೆ. 2 ವರ್ಷದ ಕೋರ್ಸ್ ಇದಾಗಿದ್ದು, 4 ಸೆಮಿಸ್ಟರ್ ಒಳಗೊಂಡಿದೆ. ಕೋರ್ಸ್‌ಗೆ ಸೇರಬಯಸುವವರು ಮುಕ್ತ ವಿವಿ ಅಥವಾ ಸಮೀಪದ ಅಧ್ಯಯನ ಕೇಂದ್ರಗಳಿಗೆ ಭೇಟಿ ನೀಡಿ ಪ್ರವೇಶ ಪಡೆದುಕೊಳ್ಳಬಹುದು.

ಪ್ರವೇಶ ಪಡೆದ ಬಳಿಕ ವಿದ್ಯಾರ್ಥಿಗಳಿಗೆ ಕೆಎಸ್‌ಓಯು ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಈ-ಮೇಲ್, ಪಾಸ್‌ವರ್ಡ್ ನೀಡಲಾಗುತ್ತದೆ. ಈ-ಮೇಲ್ ಬಳಸಿಕೊಂಡು ಎಂಬಿಎ ಕೋರ್ಸ್‌ನ ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಪಾಠ-ಪ್ರವಚನಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು. ಸಂದೇಹ, ಗೊಂದಲವಿದ್ದರೆ ಮುಕ್ತ ವಿವಿ ಅಧ್ಯಾಪಕರ ಜೊತೆ ನಿಗದಿ ಪಡಿಸಿದ ಸಮಯದಲ್ಲಿ ಚರ್ಚಿಸಿ ಉತ್ತರ ಕಂಡುಕೊಳ್ಳಬಹುದು. ಅಥವಾ ಈ-ಮೇಲ್ ಮೂಲಕವೂ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು.

ವಿದ್ಯಾರ್ಥಿಗಳು 4ನೇ ಸೆಮಿಸ್ಟರ್‌ನಲ್ಲಿ ಇದ್ದಾಗ ಪ್ರೊಜೆಕ್ಟ್ ವರದಿಯನ್ನು ತಯಾರಿಸಿ, ಸಾಫ್ಟ್ ಕಾಪಿಯನ್ನು (ಸಿ.ಡಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ದೇಶದ ಯಾವುದೇ ಭಾಗದಿಂದ ಪರೀಕ್ಷೆ ತೆಗೆದುಕೊಂಡರೂ ಸಮೀಪದ ಅಧ್ಯಯನ ಕೇಂದ್ರಗಳಿಗೆ ಹೋಗಿ ಆನ್‌ಲೈನ್‌ನಲ್ಲೇ ಪರೀಕ್ಷೆ ಬರೆಯಬೇಕು ಎಂಬುದು ಕಡ್ಡಾಯ.

ಎಂಬಿಎಗೆ ಸೇರಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪ್ರವೇಶ ಹಣವನ್ನು ಪಾವತಿಸಬಹುದು. ಪ್ರಸಕ್ತ ವರ್ಷ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಲಭ್ಯವಿದ್ದು, ವಿದೇಶಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ನೀಡಲು ವಿವಿ ನಿರ್ಧರಿಸಿದೆ.

ಪರೀಕ್ಷೆ ಮುಗಿದ ಬಳಿಕ ಉದ್ಯೋಗಾವಕಾಶ ಕಲ್ಪಿಸಲು ವಿವಿ ವಿಶೇಷ ವ್ಯವಸ್ಥೆ ಮಾಡಿದೆ. ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳು ತಾವು ಪಡೆದಿರುವ ಅಂಕಗಳನ್ನು ಒಳಗೊಂಡ ಸ್ವವಿವರವನ್ನು ವಿವಿಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದರೆ, ವಿಶ್ವವಿದ್ಯಾನಿಲಯವೇ ಉತ್ತಮ ಕಂಪೆನಿಗಳಿಗೆ ವಿದ್ಯಾರ್ಥಿಗಳ ಹೆಸರನ್ನು ಸೂಚಿಸಿ, ಉದ್ಯೋಗ ಪಡೆಯಲು ನೆರವಾಗಲಿದೆ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ.
 

ವೆಬ್‌ಸೈಟ್: www.ksoumysore.edu.in

ದೂರವಾಣಿ: 40821-2519941/2519948
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT