ADVERTISEMENT

ಮುದ್ದಣ ಕಾವ್ಯ ಪ್ರಶಸ್ತಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಮೂಡುಬಿದಿರೆ:  ಮೂವತ್ತನಾಲ್ಕು ವರ್ಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿ ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2013ರ ಸಾಲಿನ ಕಾವ್ಯ ಪ್ರಶಸ್ತಿಗಾಗಿ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತರು ಸ್ಪರ್ಧೆಯ ವಿವರಗಳಿಗೆ ನಿರ್ದಿಷ್ಟ ಮೊತ್ತದ ಅಂಚೆ ಚೀಟಿ ಹಚ್ಚಿದ ಸ್ವವಿಳಾಸ ಇರುವಲಕೋಟೆಯನ್ನು ಅಧ್ಯಕ್ಷರು, ಕಾಂತಾವರ ಕನ್ನಡ ಸಂಘ (ರಿ), ಅಂಚೆ ಕಾಂತಾವರ -574129, ಉಡುಪಿ ಜಿಲ್ಲೆ ಇವರಿಗೆ ಜುಲೈ 30ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ಹಸ್ತಪ್ರತಿ ಸ್ವೀಕರಿಸಲು ಕಡೇ ದಿನಾಂಕ ಆಗಸ್ಟ್ 15.  ಮಾಹಿತಿಗೆ 90089 78366.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.