ADVERTISEMENT

‘ಮೋದಿಯನ್ನು ನಟರಿಗೆ ಹೋಲಿಸಬಾರದಿತ್ತು’

ಸಾಹಿತಿ ನಟರಾಜ ಹುಳಿಯಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:31 IST
Last Updated 30 ಡಿಸೆಂಬರ್ 2017, 20:31 IST

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪ್ರಕಾಶ್‌ ರೈ ಅವರು ನಟನಿಗೆ ಹೋಲಿಸಬಾರದಿತ್ತು. ಈ ಮೂಲಕ ನಟರಿಗೆ ಅವಮಾನ ಮಾಡಿದಂತಾಯಿತು’ ಎಂದು ಸಾಹಿತಿ ಡಾ.ನಟರಾಜ ಹುಳಿಯಾರ್‌ ಇಲ್ಲಿ ಶನಿವಾರ ಅಭಿಪ್ರಾಯ‍‍ಟ್ಟರು.

ರಂಗಾಯಣದಲ್ಲಿ ನಡೆಯುತ್ತಿದ್ದ ‘ನಿರಂತರ ರಂಗ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಭುತ್ವವನ್ನು ಟೀಕಿಸುವ ಬರದಲ್ಲಿ ರೈ ಅವರು ‘ಪ್ರಧಾನಿ ನರೇಂದ್ರ ಮೋದಿ ನನಗಿಂತಲೂ ದೊಡ್ಡ ನಟ ಎನ್ನುವ ಮೂಲಕ ನಟರಿಗೆ ಅವಮಾನ ಮಾಡಿದ್ದಾರೆ. ನಟನಿಗೆ ಸಮಾಜದ ದುಃಖ ದುಮ್ಮಾನಗಳು ತಿಳಿದಿರಬೇಕು. ಆದರೆ, ಮೋದಿಯವರಿಗೆ ಇದಾವುದೂ ಗೊತ್ತಿಲ್ಲ. ಅವರು ನಟನೆಯನ್ನು ಹಿಟ್ಲರ್‌ನಿಂದ ಕಲಿತರೊ ಏನೋ ಎಂಬ ಅನುಮಾನ ಬರುತ್ತದೆ’ ಎಂದು ಕುಟುಕಿದರು.

ADVERTISEMENT

‘ನಟನಿಗೆ ಆತ್ಮವಿಮರ್ಶೆ ಮೊದಲ ಮಾನದಂಡವಾಗಬೇಕು. ಆತ್ಮವಿಮರ್ಶೆಯ ಅರ್ಥವೇ ಗೊತ್ತಿಲ್ಲದ ಮೋದಿ ಒಳ್ಳೆಯ ನಟನಾಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.