ADVERTISEMENT

ಮೋದಿ ಸರ್ಕಾರ ನಿರೀಕ್ಷಿತ ತೃಪ್ತಿ ತಂದಿಲ್ಲ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 9:05 IST
Last Updated 1 ಜೂನ್ 2018, 9:05 IST
ಮೋದಿ ಸರ್ಕಾರ ನಿರೀಕ್ಷಿತ ತೃಪ್ತಿ ತಂದಿಲ್ಲ: ಪೇಜಾವರ ಶ್ರೀ
ಮೋದಿ ಸರ್ಕಾರ ನಿರೀಕ್ಷಿತ ತೃಪ್ತಿ ತಂದಿಲ್ಲ: ಪೇಜಾವರ ಶ್ರೀ   

ಉಡುಪಿ: ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ನಿರೀಕ್ಷಿತ ಮಟ್ಟದಲ್ಲಿ ತೃಪ್ತಿ ತಂದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು. ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣವಾದರೂ ವಿದೇಶಗಳಿಂದ ಕಪ್ಪುಹಣವನ್ನು ಹೊರತರದಿರುವುದು ಹಾಗೂ ಗಂಗಾ ಶುದ್ಧೀಕರಣ ಆಗದಿರುವುದು ಮೋದಿ ಸರ್ಕಾರಕ್ಕೆ ಹಿನ್ನಡೆ ಎಂದರು.

ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದೇವೇಳೆ ರಾಮಮಂದಿರ ನಿರ್ಮಾಣಕ್ಕಿಂತಲೂ, ಗಂಗಾ ನದಿಯ ಶುದ್ದೀಕರಣ ಇಂದಿನ ಅಗತ್ಯ ಎಂದು ಶ್ರೀಗಳು ಒತ್ತಿ ಹೇಳಿದರು.

ರಾಜ್ಯ ರಾಜಕೀಯ ಬೇಸರ ತರಿಸಿದೆ: ರಾಜ್ಯದಲ್ಲಿ ರೆಸಾರ್ಟ್‌ ರಾಜಕಾರಣ, ಅಸಭ್ಯ ಪದಗಳ ಬಳಕೆ, ಹಣದ ಆಮಿಷವೊಡ್ಡುವ ಮೂಲಕ ಎಲ್ಲ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ವಿಕೃತಿಗೊಳಿಸುತ್ತಿವೆ ಎಂದು ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಚುನಾವಣೆಯಲ್ಲಿ ಯಾರಿಗೂ ಬಹುಮತ ಬರದಿದ್ದರೆ, ಸರ್ವಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬುದು ನನ್ನ ಅನಿಸಿಕೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದ್ದಾರೆ. ಅವರು ಪೂರ್ಣಾವಧಿಗೆ ಸರ್ಕಾರ ನಡೆಸಲಿ ಎಂದು ಪೇಜಾವರ ಶ್ರೀಗಳು ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.