ಬಾಗಲಕೋಟೆ: ‘ಬಿಜೆಪಿ ಎಂಬ ಬಿದಿರಿನ ಬುಟ್ಟಿಯಲ್ಲಿ ಇರುವ ಮಾವಿನಹಣ್ಣುಗಳಲ್ಲಿ ಶೇ 75ರಷ್ಟು ಕೊಳೆತು ನಾರುತ್ತಿವೆ, ಶೇ 25 ಹಣ್ಣುಗಳು ಮಾತ್ರ ಅಲ್ಪಸ್ವಲ್ಪ ಚೆನ್ನಾಗಿವೆ. ಕೊಳೆತ ಹಣ್ಣಿನ ವಾಸನೆ ಬಾರದಂತೆ ಪ್ಲಾಸ್ಟಿಕ್ ಪೇಪರ್‌ನಿಂದ ಸುತ್ತಿ, ಸುಂದರವಾಗಿ ಪ್ಯಾಕ್ ಮಾಡಿ ಅದರ ಮೇಲೆ ನರೇಂದ್ರ ಮೋದಿ ಎಂಬ ಒಂದೇ ಒಂದು ಗುಜರಾತ್ ಹಣ್ಣು ಇಟ್ಟು ಚುನಾವಣೆ ಎಂಬ ಮಾರುಕಟ್ಟೆಯಲ್ಲಿ ಇಡೀ ಬುಟ್ಟಿಯನ್ನು ಮಾರಾಟ ಮಾಡಲು ಬಿಜೆಪಿ ಹವಣಿಸುತ್ತಿದೆ’ಹೀಗೆಂದು ರಾಜ್ಯ ಬಿಜೆಪಿ ನಾಯಕರನ್ನು ಕೊಳೆತ ಮಾವಿನಹಣ್ಣಿಗೆ ಹೋಲಿಸಿದವರು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸರ್ವಜನಶಕ್ತಿ ಪಕ್ಷದ ಅಧ್ಯಕ್ಷ ಶಂಕರ ಬಿದರಿ.
ರಾಜ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಮುಖಂಡರು ಭ್ರಷ್ಟಾಚಾರ, ಅನೈತಿಕತೆ, ಸ್ವಜನ ಪಕ್ಷಪಾತ, ಅವ್ಯವಹಾರದಿಂದ ಕೂಡಿದ ಆಡಳಿತ ನೀಡಿರುವ ಉದಾಹರಣೆ ಇರುವುದರಿಂದ ಆ ಪಕ್ಷದ ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ‘ಮೋದಿ ಹವಾ’ದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಈ ಚುನಾವಣೆಯಲ್ಲಿ ಜನತೆ ನನಗೆ ಬೆಂಬಲ ನೀಡಿದರೆ ದೇಶದಲ್ಲೇ ಮಾದರಿ ಸಂಸದನಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.