ADVERTISEMENT

ಯು.ಆರ್‌.ರಾವ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST
ಯು.ಆರ್‌.ರಾವ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ
ಯು.ಆರ್‌.ರಾವ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ   

ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌ ಅವರು ಪ್ರತಿಷ್ಠಿತ ‘ಐಎಎಫ್‌ ಹಾಲ್‌ ಆಫ್‌ ಫೇಮ್‌’ ಸೇರ್ಪಡೆ  ಗೌರವಕ್ಕೆ  ಪಾತ್ರರಾಗಿದ್ದಾರೆ. ಇಂಟರ್‌ನ್ಯಾಷನಲ್‌ ಏರೋನಾಟಿಕಲ್‌ ಫೆಡರೇಷನ್‌ (ಐಎಎಫ್‌) ನೀಡುವ ಈ ಗೌರವ  ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.

ಸೆ. 30 ರಂದು ಮೆಕ್ಸಿಕೊದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಏರೋನಾಟಿಕಲ್‌ ಕಾಂಗ್ರೆಸ್‌  ಸಮಾವೇಶದಲ್ಲಿ ರಾವ್‌ ಅವರ ಹೆಸರನ್ನು ಹಾಲ್‌ ಆಫ್‌ ಫೇಮ್ ಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಯಿತು ಎಂದು ಇಸ್ರೊ  ತಿಳಿಸಿದೆ.

ಕನ್ನಡಿಗರೇ ಆದ ಯು.ಆರ್‌.ರಾವ್‌ ಅವರು ಭಾರತೀಯ ಕೃತಕ ಉಪಗ್ರಹ ತಂತ್ರಜ್ಞಾನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು. ಭಾರತದ ಚೊಚ್ಚಲ ಉಪಗ್ರಹ ‘ಆರ್ಯಭಟ’ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಹಾಲ್‌ ಆಫ್‌ ಫೇಮ್‌ ಎಂದರೇನು?
ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಸಾಧನೆ ಬಣ್ಣಿಸುವ ಕಾಯಂ ಗ್ಯಾಲರಿಯನ್ನು  ಸ್ಥಾಪಿಸಿದೆ. ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗುವ ವ್ಯಕ್ತಿಗಳ ಕುರಿತ ಬಿನ್ನವತ್ತಳೆ, ಜೀವನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರವನ್ನು  ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.