ADVERTISEMENT

ಯು.ಎಫ್‌.ಒ, ಕ್ಯೂಬ್‌ಗೆ ಸೆಡ್ಡು

ಡಿಜಿಟಲ್‌ ಸೇವೆಗೆ ಮುಂದಾದ ಮಂಡಳಿ, ನಿರ್ಮಾಪಕರ ಸಂಘ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಯು.ಎಫ್‌.ಒ, ಕ್ಯೂಬ್‌ಗೆ ಸೆಡ್ಡು
ಯು.ಎಫ್‌.ಒ, ಕ್ಯೂಬ್‌ಗೆ ಸೆಡ್ಡು   

ಬೆಂಗಳೂರು: ಸಿನಿಮಾ ಪ್ರದರ್ಶನದ ಡಿಜಿಟಲ್‌ ಸೇವೆ ಪೂರೈಸುವ ಯು.ಎಫ್‌.ಒ, ಕ್ಯೂಬ್‌ ಕಂಪನಿಗಳ ನಡುವಿನ ಮಾತುಕತೆ ಮುರಿದುಬಿದ್ದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಮೂಲಕ ಡಿಜಿಟಲ್‌ ಸೇವೆ ಪೂರೈಸಲು ನಿರ್ಧರಿಸಲಾಗಿದೆ.

ಚಿತ್ರಮಂದಿರವೊಂದರ ಪ್ರೊಜೆಕ್ಟರ್‌ಗೆ ಕಂಪನಿಗಳ ಹೂಡಿಕೆ ₹ 8 ಲಕ್ಷ. ಪ್ರತಿ ತಿಂಗಳು ಪ್ರದರ್ಶಕರು, ನಿರ್ಮಾಪಕರಿಂದ ₹ 30 ಸಾವಿರ ಲಾಭ ಪಡೆಯುತ್ತಿವೆ. ಇನ್ನೊಂದೆಡೆ ವಾಣಿಜ್ಯ ಮಂಡಳಿಯ ಷರತ್ತಿಗೂ ಒಪ್ಪಿಲ್ಲ. ಹಾಗಾಗಿ, ಮೊದಲ ಹಂತದಲ್ಲಿ ರಾಜ್ಯದ 100 ಚಿತ್ರಮಂದಿರಗಳಲ್ಲಿ ಪ್ರೊಜೆಕ್ಟರ್‌ ಅಳವಡಿಸುವ ಪರ್ಯಾಯ ಕ್ರಮಕ್ಕೆ ವಾಣಿಜ್ಯ ಮಂಡಳಿ ದಿಟ್ಟಹೆಜ್ಜೆ ಇಟ್ಟಿದೆ.

ಕಳೆದ ಮೂರು ತಿಂಗಳಿನಿಂದಲೂ ಶುಲ್ಕ ವಿವಾದ ತಲೆದೋರಿತ್ತು. ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಬೇಡಿಕೆಗೆ ಕಂಪನಿಗಳು ಮನ್ನಣೆ ನೀಡಿಲ್ಲ. ಶನಿವಾರ ಮಂಡಳಿಯ ಕಚೇರಿಯಲ್ಲಿ ನಡೆದ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ADVERTISEMENT

‘ಕಂಪನಿಗಳು ನಮಗೆ ಪಾಠ ಕಲಿಸಿವೆ. ಈಗಲೂ ನಾವು ಬುದ್ಧಿ ಕಲಿಯದಿದ್ದರೆ ಉಳಿಗಾಲವಿಲ್ಲ. ಕಂಪನಿಗಳ ಅವೈಜ್ಞಾನಿಕ ಒಪ್ಪಂದದಿಂದ 80ಕ್ಕೂ ಹೆಚ್ಚು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ’ ಎಂದು ಸಭೆಯ ಬಳಿಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.