ಗುಂಡ್ಲುಪೇಟೆ: ಕೆಲವೇ ದಿನಗಳ ಹಿಂದೆ ಸಹೋದರನ ವಿವಾಹ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದ ತಾಲ್ಲೂಕಿನ ಗೋಪಾಲಪುರ ಗ್ರಾಮದ ನಿವಾಸಿ, ಸಿಆರ್‌ಪಿಎಫ್ ಯೋಧ ಜಿ.ಎಸ್. ರಾಜಶೇಖರ್ ಅವರು ಉತ್ತರಪ್ರದೇಶದ ಲಖನೌದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಜಿ.ಎಸ್. ಶಾಂತಪ್ಪ ಮತ್ತು ಪಾರ್ವತಮ್ಮ ದಂಪತಿ ಪುತ್ರರಾದ ರಾಜಶೇಖರ್ ಶುಕ್ರವಾರ ಲಖನೌದಲ್ಲಿ ಕರ್ತವ್ಯಕ್ಕೆಂದು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟರು.
1999ರಲ್ಲಿ ಸಾಮಾನ್ಯ ಕರ್ತವ್ಯದ ಯೋಧನಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸೇರಿದ್ದ ಅವರು 2ವರ್ಷಗಳಿಂದ ಲಖನೌದಲ್ಲಿ ಸೇವೆಯಲ್ಲಿದ್ದರು. ಬಾಚಹಳ್ಳಿ ಗ್ರಾಮದ ಶ್ವೇತಾ ಎಂಬುವವರನ್ನು ಮದುವೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.