ADVERTISEMENT

ರಜೆ ಘೋಷಣೆ: ವಾಲ್ಮೀಕಿ ಪರಿಷತ್ತಿನ ಸ್ವಾಗತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗಾಗಿ ಸರ್ಕಾರಿ ರಜೆ ಘೋಷಿಸಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ತಿನ ರಾಜ್ಯ ಅಧ್ಯಕ್ಷ ಬಿ.ವಿ.ಬಸವರಾಜ ನಾಯಕ ಸ್ವಾಗತಿಸಿದ್ದಾರೆ.

ಸಮುದಾಯದ ಒಳಿತಿಗಾಗಿ `ರಾಮಾಯಣ~ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಋಷಿಗಳು, ಜಗತ್ತಿಗೆ ಧರ್ಮ, ಶಿಕ್ಷಣ, ಸಮಾನತೆ, ರಾಜನೀತಿ ಭಕ್ತಿ, ತ್ಯಾಗ, ಸಮನ್ವಯತೆ, ಪ್ರಜಾಕಲ್ಯಾಣವನ್ನು ಹೇಳಿದರು. ಅಂತಹ ಮಹಿಮನ ಜಯಂತಿ ಆಚರಿಸುವುದು ಎಲ್ಲರ ಕರ್ತವ್ಯ, ಈ ಸಂದರ್ಭದಲ್ಲಿ ನಾಡಿನ ಜನತೆಗೆ ವಾಲ್ಮೀಕಿ ನಾಯಕ ಪರಿಷತ್ತು ಶುಭಾಶಯಗಳನ್ನು ಸಲ್ಲಿಸುತ್ತದೆ ಎಂದು ಬಸವರಾಜ ನಾಯಕ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
 
ರಾಜ್ಯ ಸರ್ಕಾರ ವಿಧಾನಸೌಧದ ಬ್ವಾಂಕೆಟ್‌ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಮಂಗಳವಾರ ಬೆಳಿಗ್ಗೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.