
ಕಾರವಾರ: ತಾಲ್ಲೂಕಿನ ಸದಾಶಿವಗಡದ ಕ್ರೈಸ್ತ ಸಭಾಭವನ ಮಂಗಳವಾರ ಅಪರೂಪದ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಕಾರವಾರದ ಮೆಲ್ವಿನ್, ರಷ್ಯಾದ ಯುವತಿ ಅನಸ್ಟಿಷಿಯಾಳನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು.
ಮಾತು ಬಾರದ ಈ ಜೋಡಿ ಪರಸ್ಪರ ಪರಿಚಯವಾಗಿದ್ದು ಫೇಸ್‌ಬುಕ್ ಮೂಲಕ. ಪರಿಚಯ, ಗೆಳೆತನದ ಹಂತ ದಾಟಿ ಪ್ರೇಮಾಂಕುರವಾಯಿತು.
ಮೊದಲು ಅನಸ್ಟಿಷಿಯಾ ಮನೆಯಲ್ಲಿ ಈ ಮದುವೆಗೆ ವಿರೋಧ ವ್ಯಕ್ತವಾಯಿತು ಎನ್ನಲಾಗಿದ್ದು ಮಗಳು ಹಟ ಹಿಡಿದ ಕಾರಣ ಪಾಲಕರು ಕೊನೆಗೂ ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ಮಂಗಳವಾರ ಅವರೇ ಮುಂದೆ ನಿಂತು ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.
ಐಟಿಐ ಓದಿರುವ ಮೆಲ್ವಿನ್ ಗ್ಯಾರೇಜ್ ಒಂದರಲ್ಲಿ ವಾಹನಗಳಿಗೆ ಬಣ್ಣ ಸ್ಪ್ರೇ ಮಾಡುವ ಕೆಲಸದಲ್ಲಿದ್ದಾರೆ. ಅವರಿಗೆ ತಾಯಿ ಮಾತ್ರ ಇದ್ದಾರೆ. ಸಮಾರಂಭದಲ್ಲಿ ಮೆಲ್ವಿನ್ ಕಡೆಯ ಸಂಬಂಧಿಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು.
ಅನಸ್ಟಿಷಿಯಾ ಕೂಡ ತಾಂತ್ರಿಕ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿದ್ದು, ಪತಿಯೊಂದಿಗೆ ಇಲ್ಲಿಯೇ ವಾಸಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.