ADVERTISEMENT

ರಾಜ್ಯದ ಚಿನ್ನಪ್ಪ ಸೇರಿ 28 ಮಂದಿಗೆ ಯುವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:50 IST
Last Updated 12 ಜನವರಿ 2012, 19:50 IST

ಮಂಗಳೂರು: ಯುವಜನೋತ್ಸವ ಉದ್ಘಾಟನಾ ಸಮಾರಂಭದಲ್ಲಿ 19 ರಾಜ್ಯಗಳ 28 ಮಂದಿಗೆ ಹಾಗೂ ಎರಡು ಸ್ವಯಂಸೇವಾ ಸಂಘಟನೆಗಳಿಗೆ 2010-11ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ವಯಂಸೇವಾ ಸಂಘಟನೆಗಳಾದ ಆಂಧ್ರಪ್ರದೇಶದ ಆಕ್ಷನ್ ರೂರಲ್ ಟೆಕ್ನಾಲಜಿ ಸಂಸ್ಥೆ, ರಾಜಸ್ತಾನದ ನವಚಾರ್ ಸಂಸ್ಥಾನ್‌ಗೆ ರೂ. 2 ಲಕ್ಷ, ಫಲಕ, ಪ್ರಶಸ್ತಿ ಪತ್ರ ನೀಡಿ ಕೇಂದ್ರ ಸಚಿವ ಅಜಯ್ ಮಾಕನ್ ಗೌರವಿಸಿದರು. ಯುವ ಸಾಧಕರಿಗೆ ರೂ. 40 ಸಾವಿರ, ಫಲಕ, ಪ್ರಶಸ್ತಿ ಪತ್ರ ವಿತರಿಸಲಾಯಿತು. 

ಕರ್ನಾಟಕದ ವೈ.ಚಿನ್ನಪ್ಪ, ಆಂಧ್ರಪ್ರದೇಶ, ಹರಿಯಾಣದ ತಲಾ ಮೂವರು, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರಗಳ ತಲಾ ಇಬ್ಬರು,  ಕೇರಳ, ಮಧ್ಯಪ್ರದೇಶ, ಉತ್ತರಾಖಂಡ್, ಮಣಿಪುರ, ಮೇಘಾಲಯ, ತ್ರಿಪುರ, ಪುದುಚೇರಿ, ಒಡಿಶಾ, ದೆಹಲಿ, ಗೋವಾ, ಗುಜರಾತ್‌ನ ತಲಾ ಒಬ್ಬರು ಪ್ರಶಸ್ತಿ ಸ್ವೀಕರಿಸಿದರು.

`ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ. ಇನ್ನಷ್ಟು ಸಮಾಜಸೇವೆ ಮಾಡಬೇಕು ಎಂಬ ಸಂಕಲ್ಪ ನನ್ನದಾಗಿದೆ~ ಎಂದು ಚಿನ್ನಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.