ಬೆಂಗಳೂರು: ಸಾಗರ ಫೋಟೋಗ್ರಾಫಿಕ್ ಸೊಸೈಟಿಯು 35 ವರ್ಷದೊಳಗಿನವರಿಗಾಗಿ `12ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ~ ಏರ್ಪಡಿಸಿದೆ.
`ಗ್ರಾಮೀಣ ಬದುಕು~ ಮತ್ತು `ಕ್ಯಾಂಡಿಡ್ ಕ್ಷಣ~ ಈ ಬಾರಿಯ ಸ್ಪರ್ಧೆಯ ವಿಷಯಗಳು. ಸ್ಪರ್ಧೆಯಲ್ಲಿ ಭಾಗವಹಿಸುವವರು 8್ಡ12 ಅಳತೆಯ, ತಲಾ ನಾಲ್ಕು ಚಿತ್ರಗಳನ್ನು ಕಳುಹಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ಆಸಕ್ತರು ಉಚಿತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರವೇಶ ಪತ್ರಕ್ಕಾಗಿ, ಸ್ವ-ವಿಳಾಸ ಮತ್ತು ಮರು ಅಂಚೆ ಸ್ಟಾಂಪ್ ಹಚ್ಚಿದ ಲಕೋಟೆಯನ್ನು ಕೆಳಗಿನ ವಿಳಾಸಕ್ಕೆ ಬರೆಯಲು ಕೋರಲಾಗಿದೆ. ಕೆ. ಚಂದ್ರಶೇಖರ್, ಕಾರ್ಯದರ್ಶಿ, ಸಾಗರ ಫೋಟೋಗ್ರಾಫಿಕ್ ಸೊಸೈಟಿ, `ಓಂಕಾರ ನಿಲಯ~, ಅಣಲೇಕೊಪ್ಪ, ಸಾಗರ (ತಾ), ಶಿವಮೊಗ್ಗ ಜಿಲ್ಲೆ- 577401 ದೂರವಾಣಿ - 9480280977, 08183-229243
ಇ-ಮೇಲ್ ವಿಳಾಸ: aglnarayan@gmail.com ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್ 15.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.