ಬೆಂಗಳೂರು: ನಿರೀಕ್ಷೆಯಂತೆ ಬೆಂಗಳೂರು ನಗರಕ್ಕೆ 2014–15ನೇ ಸಾಲಿನ ಬಜೆಟ್‌ನಲ್ಲಿ ಅತಿ ಹೆಚ್ಚು ಅನುದಾನ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೂ ಆದ್ಯತೆ ದೊರೆತಿದೆ. ಆದರೆ, ಹಾವೇರಿ, ಕೊಡಗು, ರಾಯಚೂರು, ಚಿಕ್ಕಮಗಳೂರು, ಗದಗ ಮುಂತಾದ ಜಿಲ್ಲೆಗಳಿಗೆ ಕಡಿಮೆ ಅನುದಾನ ಹಂಚಿಕೆಯಾಗಿದೆ.
ಬೀದರ್
*ಮೈಲಾರ ಮಲ್ಲಣ್ಣನವರ ಕ್ಷೇತ್ರ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನ
*ನೂತನ ಜಿ.ಪಂ. ಕಟ್ಟಡ ನಿರ್ಮಾಣ
ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ಆರಂಭ
*ಪಶುವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಅನುದಾನ
ಗುಲ್ಬರ್ಗ
*ಕ್ಯಾನ್ಸರ್ ಕೇಂದ್ರ ಸ್ಥಾಪನೆ
*ಅಪೌಷ್ಟಿಕತೆ ತಡೆಗಟ್ಟಲು ರೂ. 1.55 ಕೋಟಿ ವೆಚ್ಚ
*ಹಜ್ ಭವನ ನಿರ್ಮಾಣ
*ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ
*ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ
*ಪುಷ್ಟಿ ಬಿಸ್ಕತ್ ಒದಗಿಸಲು ಕ್ರಮ
*250 ಹಾಸಿಗೆ ಸಾಮರ್ಥ್ಯದ ಸ್ಪೆಷಾಲಿಟಿ ಆಸ್ಪತ್ರೆ
ರಾಯಚೂರು
*ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ
*ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ
ಯಾದಗಿರಿ
* ಹೊಸ ವೈದ್ಯಕೀಯ ಕಾಲೇಜು
* ರೈಲ್ವೆ ಬೋಗಿ ನಿರ್ಮಾಣ ಘಟಕಗಳ ಸ್ಥಾಪನೆಗೆ ಕ್ರಮ
*ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದ ನಿರ್ಮಾಣಕ್ಕೆ ರೂ. 7.73 ಕೋಟಿ
ಕೊಪ್ಪಳ
*ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಮತ್ತು ಸಮುದಾಯ ಭವನ
*ಬಂಜಾರ ಸಮುದಾಯ ಮತ್ತು ಬಹಾದ್ದೂರ್ ಬಂಡಿ ಕ್ಷೇತ್ರ ಅಭಿವೃದ್ಧಿಗೆ ರೂ. 75 ಕೋಟಿ
*ಅಂತರ್ಜಲ ಅಭಿವೃದ್ಧಿಗೆ ನದಿ ಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ
*ಭಾರತ ಮೀಸಲು ತುಕಡಿಗಳಿಗಾಗಿ, ವಸತಿ ಗೃಹ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣ
ಬಳ್ಳಾರಿ
*ಬಳ್ಳಾರಿ ವಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ
*ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ
*ಮಡಿಲು ಕಿಟ್ ಯೋಜನೆ ಮಿತಿ ಹೆಚ್ಚಳ ಮತ್ತು ಪ್ರಸೂತಿ ಆರೈಕೆ ಯೋಜನೆ ವಿಸ್ತರಣೆ.
*ಪುಷ್ಟಿ ಬಿಸ್ಕತ್ ಒದಗಿಸಲು ಪರಿಶೀಲನೆ
ಚಿತ್ರದುರ್ಗ
*ಹೊಸ ವೈದ್ಯಕೀಯ ಕಾಲೇಜು
*ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ
*ಸೌರಶಕ್ತಿ ಚಾಲಿತ ಪಂಪ್ ಅಳವಡಿಕೆಗೆ ನೆರವು
ದಾವಣಗೆರೆ
*ಹರಿಹರದಲ್ಲಿ ದಲಿತ ಹೋರಾಟ ದಿ. ಬಿ. ಕೃಷ್ಣಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ರೂ. 1 ಕೋಟಿ
*ತುಂಗಭದ್ರಾ ನದಿಯಿಂದ ಚನ್ನಗಿರಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ನೀರು
*ಸೌರಶಕ್ತಿ ಚಾಲಿತ ಪಂಪು ಅಳವಡಿಕೆಗೆ ಹಣ ನೀಡುವ ಯೋಜನೆ
*ರೂ. 1.8 ಕೋಟಿ ವೆಚ್ಚದಲ್ಲಿ ಗೃಹ ರಕ್ಷಕ, ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರ ನಿರ್ಮಾಣ
*ಸಾಸ್ವೇಹಳ್ಳಿ ಹತ್ತಿರ ಏತ ನೀರಾವರಿ ಯೋಜನೆ
ಚಿಕ್ಕಬಳ್ಳಾಪುರ
*ಹೊಸ ವೈದ್ಯಕೀಯ ಕಾಲೇಜು
*ವಿಶ್ವೇಶ್ವರಯ್ಯ ರಾಷ್ಟ್ರೀಯ ಮಾಸ್ಟರ್ ಟ್ರೇನರ್ಸ್ ತರಬೇತಿ ಸಂಸ್ಥೆ
*ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 1ಕೋಟಿ ವೆಚ್ಚದಲ್ಲಿ ಹೊಸೂರಿನಲ್ಲಿ ವಿಜ್ಞಾನ ಪಾರ್ಕ್
*ಡಾ. ಎಚ್. ನರಸಿಂಹಯ್ಯ ಸಮಾಧಿ ಅಭಿವೃದ್ಧಿಗೆ
ರೂ. 1 ಕೋಟಿ
*ವಿದುರಾಶ್ವತ್ಥದಲ್ಲಿ ಹುತಾತ್ಮ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ ಅಭಿವೃದ್ಧಿ
*ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ
*ಗೌರಿಬಿದನೂರು ತಾಲ್ಲೂಕಿನಲ್ಲಿ ರೂ. 3 ಕೋಟಿ ವೆಚ್ಚದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ
ಕೋಲಾರ
*ರೂ. 1.55 ಕೋಟಿ ವೆಚ್ಚದಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಬಹುವಲಯ ಪೌಷ್ಟಿಕ ಕಾರ್ಯಕ್ರಮ
*ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ
*ಪಶು ರೋಗ ಪತ್ತೆಗೆ ಪ್ರಯೋಗಾಲಯ ನಿರ್ಮಾಣಕ್ಕೆ ರೂ. 2 ಕೋಟಿ
*ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ
*ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಸ್ಥಾಪನೆ
ಮೈಸೂರು
*ಪಡುವಾರಹಳ್ಳಿಯಲ್ಲಿ ಹಾಸ್ಟೆಲ್ ಸಹಿತ ಮಹಾರಾಣಿ ವಾಣಿಜ್ಯ ಮತ್ತು ಎಂಬಿಎ ಕಾಲೇಜು ನಿರ್ಮಾಣ.
*ಮೈಸೂರಿನ ನಂಜರಾಜ್ ಬಹಾದ್ದೂರ್ ಛತ್ರದ ಆವರಣದಲ್ಲಿ ಹೆಚ್ಚುವರಿ ಹಾಸ್ಟೆಲ್ ನಿರ್ಮಾಣ
*250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
*ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ
*ಹುಣಸೂರಿನಲ್ಲಿ ಅರಸು ಭವನಕ್ಕೆ ರೂ. 5 ಕೋಟಿ
*ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ರೂ. 100 ಕೋಟಿ
*ನುಗು ಮೇಲ್ದಂಡೆ ನಾಲೆ ಅಭಿವೃದ್ಧಿ ಹುಣಸೂರಿನ ಹನಗೋಡು, ಹಾರಂಗಿ ನಾಲೆಗಳ ಅಭಿವೃದ್ಧಿ
*ಜಿಲ್ಲಾ ಕಚೇರಿ ಕಟ್ಟಡ ಸಂಕೀರ್ಣ ಕಟ್ಟಡ ನಿರ್ಮಾಣ
*ಎಂ–ಟ್ರ್ಯಾಕ್–1 ಯೋಜನೆಗೆ ರೂ. 40 ಕೋಟಿ
ರಾಮನಗರ
*ಕಣ್ವ ಜಲಾಯಶ ನಾಲೆಗಳ ಅಭಿವೃದ್ಧಿ
*ಕೈಲಾಂಚ ಕುಡಿಯುವ ನೀರಿನ ಯೋಜನೆ
ಚಾಮರಾಜನಗರ
*ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ರೂ. 7.63 ಕೋಟಿ
*ಸುವರ್ಣಾವತಿ ಜಲಾಶಯದ ಎಡದಂಡೆ, ಬಲದಂಡೆ ಕಾಲುವೆ ಅಭಿವೃದ್ಧಿ
*ಚಿಕ್ಕಹೊಳೆ ಜಲಾಶಯದ ಕಾಲುವೆಗಳ ಅಭಿವೃದ್ಧಿ
*ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ ರೂ. 3 ಕೋಟಿ
ದಕ್ಷಿಣ ಕನ್ನಡ
*ಪಿಲಿಕುಳ ನಿಸರ್ಗಧಾಮ. ಪಿಪಿಪಿ ಮಾದರಿಯಲ್ಲಿ ಓಷನೇರಿಯಮ್ ನಿರ್ಮಾಣ
*ರೂ. 1ಕೋಟಿ ವೆಚ್ಚದಲ್ಲಿ ದಲಿತೋದ್ಧಾರಕ ಕುದ್ಮಲ್ ರಂಗರಾವ್ ಸ್ಮಾರಕ ಅಭಿವೃದ್ಧಿ
*ಹಜ್ ಭವನ ನಿರ್ಮಾಣಕ್ಕೆ ಕ್ರಮ
*2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ
*ರೂ. 2200 ಕೋಟಿ ವೆಚ್ಚದಲ್ಲಿ 18.5 ಕಿ.ಮೀ. ಉದ್ದದವರೆಗೆ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಯೋಜನೆ
*ಕಿರುಬಂದರು ಅಭಿವೃದ್ಧಿಪಡಿಸಲು ಕ್ರಮ
*ಮಂಗಳೂರಿನಲ್ಲಿ ರೂ. 25 ಕೋಟಿ ವೆಚ್ಚದಲ್ಲಿ ಎಂ–ಟ್ರ್ಯಾಕ್ 2 ಯೋಜನೆ ಆರಂಭ
*ವಾಹನ ತಪಾಸಣಾ, ಪ್ರಮಾಣೀಕರಣ ಕೇಂದ್ರ ಸ್ಥಾಪನೆಗೆ ಯೋಜನೆ
ಮಂಡ್ಯ
*ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 75 ಕೋಟಿ
*ಕ್ಯಾನ್ಸರ್ ಕೇಂದ್ರ ಸ್ಥಾಪನೆ
*ನಾಲ್ವಡಿ ಕೃಷ್ಣರಾಜ ಒಡೆಯರ್ ಅಮೃತ ಮಹೋತ್ಸವಕ್ಕೆ ರೂ. 2 ಕೋಟಿ
*ವಿಶ್ವೇಶ್ವರಯ್ಯ ನಾಲೆ, ಬಂಗಾರದೊಡ್ಡಿ ನಾಲೆ ಅಭಿವೃದ್ಧಿ
ಉಡುಪಿ
*ಕುಂದಾಪುರ ತಾಲ್ಲೂಕಿನ ಉಪ್ಪುಂದ ಗ್ರಾಮದ ಮಡಿಕಳ ಬಳಿ ಹೊರಬಂದರು ನಿರ್ಮಾಣ
*ಕಾರ್ಕಳದಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮದ ಮೂಲಕ ತರಬೇತಿ ಕೇಂದ್ರ
ತುಮಕೂರು
*ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ
*ತಾಂಡಾ ಅಭಿವೃದ್ಧಿಯ ನಿಗಮ ಪ್ರಾದೇಶಿಕ ಕಚೇರಿ ಸ್ಥಾಪನೆ
*ಶಿರಾದಲ್ಲಿ ಪಶುರೋಗ ಪತ್ತೆಗೆ ರೂ. 2ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ
*ಹೇಮಾವತಿ ಜಲಾಶಯದ ನಾಲೆಗಳ ಆಧುನೀಕರಣ
ಕೊಡಗು
*ಮಡಿಕೇರಿಯ ರಾಜಾಸೀಟ್ ಅಭಿವೃದ್ಧಿ
*ಆನೆ ಮನುಷ್ಯನ ಸಂಘರ್ಷ ತಡೆಗೆ ಸೌರಬೇಲಿ
*ಸ್ವಯಂ ಚಾಲಿತ ಚಾಲನಾ ಪರೀಕ್ಷೆ
ಹಾಸನ
*ಹಾರಂಗಿ ನಾಲೆಗಳ ಅಭಿವೃದ್ಧಿ
*ಸೌರಶಕ್ತಿ ಚಾಲಿತ ಪಂಪ್‌ಗೆ ಅನುದಾನ
ಚಿಕ್ಕಮಗಳೂರು
*ಶೃಂಗೇರಿಯಲ್ಲಿ ತೆಂಗಿನ ನಾರು ಅಭಿವೃದ್ಧಿ ನಿಗಮ ಸ್ಥಾಪನೆ
ಶಿವಮೊಗ್ಗ
*ಪಶುವೈದ್ಯ ಕಾಲೇಜಿನ ಅಭಿವೃದ್ಧಿಗೆ ಹಣ
*ನಗರದ ಪ್ರದೇಶದ ಅರಣ್ಯ ಗಡಿಯಲ್ಲಿ ಚೈನ್‌ಲಿಂಗ್ ಮೆಷ್, ಕಂಪೌಂಡ್ ನಿರ್ಮಾಣ
ಉತ್ತರ ಕನ್ನಡ
*ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ
*ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆ
*ಬನವಾಸಿ ಅಭಿವೃದ್ಧಿ ಪ್ರಾಧಿಕಾರ
*ಪಶುರೋಗ ಪತ್ತೆಗೆ ಶಿರಸಿಯಲ್ಲಿ ಪ್ರಯೋಗಾಲಯ
ಹಾವೇರಿ
*ವೈದ್ಯಕೀಯ ಕಾಲೇಜು
ಧಾರವಾಡ
*ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ವೇಮನ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ
*ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ಬಸವೇಶ್ವರ ಪೀಠದ ಕಾರ್ಯಚಟುವಟಿಕೆಗಳಿಗಾಗಿ ರೂ. 1ಕೋಟಿ ಅನುದಾನ
*ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮೇಲ್ದರ್ಜೆಗೆ
*ಹುಬ್ಬಳ್ಳಿಯಲ್ಲಿ ಖಾದಿ ಗ್ರಾಮೋದ್ಯಮ ಸಂಘಕ್ಕೆ ರೂ. 1ಕೋಟಿ
ಬೆಳಗಾವಿ
*ವೀರಭದ್ರೇಶ್ವರ ಏತ ನೀರಾವರಿ ಯೋಜನೆ
*ಹಿಪ್ಪರಗಿ ಅಣೆಕಟ್ಟಿನ ಕೆಳಭಾಗದಲ್ಲಿ ಸೇತುವೆ ನಿರ್ಮಾಣ
*250 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
*2ನೇ ಹಂತದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭ
*ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಆರಂಭ
*ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒಳಗೊಂಡ ಮನೆಗಳ ನಿರ್ಮಾಣ
*ಹೊಸ ರಾಜ್ಯ ದತ್ತ ಕೇಂದ್ರ
ಗದಗ
*ಗಾಳಿ ಮತ್ತು ಸೌರಶಕ್ತಿ ವೃತ್ತಿ ಘಟಕಗಳ ಸ್ಥಾಪನೆ
*ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ
ಬಾಗಲಕೋಟೆ
*ವೈದ್ಯಕೀಯ ಕಾಲೇಜು
*ಕೂಡಲಸಂಗಮ–ಅಡವಿಹಾಳ ಸೇತುವೆ ನಿರ್ಮಾಣ
*ಜಮಖಂಡಿ ತಾಲ್ಲೂಕು ವೆಂಕಟೇಶ್ವರ ಏತ ನೀರಾವರಿ ಯೋಜನೆ
ವಿಜಾಪುರ
*ಪ್ರವಾಸೋದ್ಯಮ ಇಂಟರ್‌ಪ್ರಿಟೇಷನ್ ಕೇಂದ್ರ
*ಅಂತರ್ಜಲ ಅಭಿವೃದ್ಧಿಗೆ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿ ಪಿಕಪ್ ನಿರ್ಮಾಣಕ್ಕೆ ಕ್ರಮ
ಬೆಂಗಳೂರು ಗ್ರಾಮಾಂತರ
*ಜನನ–ಮರಣ ನೋಂದಣಿಗೆ ಗಣಕೀಕರಣ ಕಾರ್ಯ ಪ್ರಾಯೋಗಿಕ ಜಾರಿ
*ದೇವನಹಳ್ಳಿಯಲ್ಲಿ ಹರಳು–ಆಭರಣದ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಕ್ರಮ
ಬೆಂಗಳೂರು ನಗರ
*ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಎಲ್ಲಾ ಮೂಲಗಳಿಂದ ರೂ. 1,527 ಕೋಟಿ ಅನುದಾನ
*ಹೊಸ ಪಾರ್ಕಿಂಗ್ ನೀತಿಯ ಅನುಷ್ಠಾನಕ್ಕಾಗಿ ರೂ. 10 ಕೋಟಿ ಅನುದಾನ
*ವಿಮಾನ ನಿಲ್ದಾಣ ಬಳಿ ಜಾಗತಿಕ ಮೈಸ್ (ಸಭೆ, ಉತ್ತೇಜನ, ಸಮಾರಂಭ ಮತ್ತು ಪ್ರದರ್ಶನ) ಕೇಂದ್ರ ನಿರ್ಮಾಣ, ಬಿ–ಟ್ರ್ಯಾಕ್ ಯೋಜನೆಯಡಿ ಆಂಬುಲೆನ್ಸ್ ಶಬ್ದಕ್ಕೆ ಸಿಗ್ನಲ್ ದೀಪ ಸರಿಹೊಂದುವ ಯೋಜನೆ ಅನುಷ್ಠಾನ
*ಬಸವೇಶ್ವರ (ಚಾಲುಕ್ಯ) ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗೆ ರೂ. 1,100 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.