ADVERTISEMENT

ರಾಷ್ಟ್ರಮಟ್ಟಕ್ಕೆ 33 ಬಾಲ ವಿಜ್ಞಾನಿಗಳ ಆಯ್ಕೆ

ರಾಜ್ಯಮಟ್ಟದ ಇನ್‌ಸ್ಪೈರ್‌ ಅವಾರ್ಡ್‌–ವಿಜ್ಞಾನ ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ದಾವಣಗೆರೆ: ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ವಿಜ್ಞಾನ ವಸ್ತುಪ್ರದರ್ಶನದಲ್ಲಿ 33 ಮಂದಿ ಬಾಲ ವಿಜ್ಞಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಡಯೆಟ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಈ ವಸ್ತು ಪ್ರದರ್ಶನದಲ್ಲಿ ಚಿತ್ರದುರ್ಗ, ಧಾರವಾಡ, ಮಂಡ್ಯ, ರಾಮನಗರ, ಬೆಂಗಳೂರು ಹಾಗೂ ಕೋಲಾರ ಜಿಲ್ಲೆಗಳ 370 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರಮಟ್ಟದ ಸ್ಪರ್ಧೆ ಅಕ್ಟೋಬರ್‌ ಎರಡನೇ ವಾರದಲ್ಲಿ ದೆಹಲಿಯಲ್ಲಿ ಆಯೋಜನೆಗೊಂಡಿದ್ದು, ರಾಜ್ಯಮಟ್ಟದಿಂದ ಆಯ್ಕೆಯಾಗಿರುವ ಮಕ್ಕಳು ಪಾಲ್ಗೊಂಡು ಮಾದರಿ ಪ್ರದರ್ಶಿಸುವರು ಎಂದು ಡಯೆಟ್‌ ಪ್ರಾಂಶುಪಾಲೆ ಎಚ್‌.ಎಂ.ಪ್ರೇಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯ್ಕೆಯಾದವರ ವಿವರ ಇಂತಿದೆ (ಆವರಣ ದಲ್ಲಿರುವ ಮಾದರಿಗಳ ಹೆಸರು)
ಭಾರತ್‌ ಮಾತಾ ಪ್ರೌಢಶಾಲೆಯ ಪಲ್ಲವಿ ಸಿ.ಶೇಖರ (ಜೈವಿಕ ಇಂಧನ), ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ ಸಂಕರ್ಷಣ್ ಎಚ್‌.ರಾವ್‌ (ಇನ್‌ಫ್ರಾರೆಡ್‌ ಆಧರಿತ ಸೆನ್ಸಾರ್‌), ವಿಜಿನಾಪುರದ ಜ್ಯುಬಿಲಿ ಸ್ಕೂಲ್‌ನ ಲಕ್ಷ್ಮಿ ಚಂದನಾ (ಆಧುನಿಕ ಓವನ್‌), ಬೆಂಗಳೂರಿನ ಮಹಿಳಾ ಸೇವಾ ಸಮಾಜದ ಎನ್‌.ಎಸ್‌.ಗೌರವ್‌ (ವಿದ್ಯುತ್‌ ಉತ್ಪಾದಿಸುವ ಗ್ರಾಮ), ದುಬಾಸಿಪಾಳ್ಯದ ಜ್ಞಾನಬೋಧಿನಿ ಪ್ರೌಢಶಾಲೆಯ ಆಕಾಶ್‌ ರಾಮಕೃಷ್ಣನ್‌ (ಸ್ವಯಂ ಚಾಲಿತ ವಿದ್ಯುತ್‌ ದೀಪ), ಶ್ರೀನಿವಾಸಪುರದ ಆದರ್ಶ ವಿದ್ಯಾಲಯದ ಅನಘಾ ಪಿ.ಚಿಕ್ಕಲ್ಕರ್‌ (ವಿಪತ್ತು ನಿರ್ವಹಿಸುವ ರೋಬೋಟ್‌), ಮಾಲೂರಿನ ವಿವೇಕಾನಂದ ಪ್ರೌಢಶಾಲೆಯ ಕೆ.ಹೇಮಂತ್‌ ಕುಮಾರ್‌ (ತರಗತಿ ಕೊಠಡಿ), ವಿಲಿಯಂ ರಿಚರ್ಡ್ಸ್‌ ಪ್ರೌಢಶಾಲೆಯ ಟಿಫೆನ್ನಿ ಕ್ರಿಸ್ಟನ್‌ ಮೆಶಾಕ್‌ (ವಿಜ್ಞಾನ), ಚೊಕ್ಕನಹಳ್ಳಿಯ ಚಿನ್ಮಯ ಗ್ರಾಮೀಣ ವಿದ್ಯಾಲಯದ ಟಿ.ಕ್ಯಾತಿ (ಸೌರಶಕ್ತಿಯ ದೋಣಿ), ಗಟ್ಟಹಳ್ಳಿಯ ಜಿ.ಎಚ್‌.ಪಿ.ಶಾಲೆಯ ಜಿ.ಎನ್‌. ಪವನ್‌ಕುಮಾರ್‌ (ಯಂತ್ರದ ಸರಳ ಅಳತೆ), ಸೇಂಟ್‌ ಮೇರಿಸ್‌ ಎಚ್‌.ಪಿ.ಶಾಲೆಯ ಎಂ.ಡಿ.ಸುನಿಲ್‌ (ಪಾಲ್ಕ್ರಮ್‌), ಎಚ್.ವಿ.ಎಸ್‌.ಪಿಳ್ಳೈ ಆಂಗ್ಲ ಮಾಧ್ಯಮ ಶಾಲೆಯ ರಾಜವಿ ಕರಾವಿ ಶೆಟ್ಟರ್‌ (ನೆರೆ ನಿರ್ವಹಣೆ ವ್ಯವಸ್ಥೆ), ಕಮಲಾಪುರದ ಸರ್ಕಾರಿ ಪ್ರೌಢಶಾಲೆಯ ಸಂತೋಷ್‌ ಎಸ್‌ ಸಜ್ಜನ್‌ (ಭದ್ರತಾ ಬಾಗಿಲು), ಗುಡಗೇರಿಯ ಎಸ್‌.ಎಚ್‌.ಎನ್‌. ಜೆ.ಪ್ರೌಢಶಾಲೆಯ ನವೀನ್‌ ಮದಭಾವಿ (ಸುಧಾರಿತ ತೇರು), ಎಚ್‌.ಪಿ.ಎಸ್‌.ಬಿ. ಗುಡಿಹಾಳ್‌ನ ಶಾರದಾ ನಲವಾಡೆ (ಪವನ ನಿಯಂತ್ರಕ), ಎಸ್‌.ಆರ್.ಜೆ.ವಿ ಎಚ್‌.ಪಿ.ಎಸ್‌. ಅಮ್ಮಿನಭಾವಿಯ ಶಾಕುಂತಲಾ ವಾಲಿ (ವೈಜ್ಞಾನಿಕ ಗ್ರಾಮ), ಹುಲಕೊಪ್ಪದ ಎಸ್‌.ಎಂ.ಟಿ. ಶಿವರಾಜದೇವಿ ಪ್ರೌಢಶಾಲೆಯ ಆರೀಫ್‌ ತೋರ್ಗಲ್‌ (ಪವನ ಮತ್ತು ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದನೆ), ಕುದೂರಿನ ಮಹಾಂತೇಶ್ವರ ಎಚ್‌.ಪಿ. ಶಾಲೆಯ ಗುಣ (ಬೈಸಿಕಲ್‌ ಬಳಸಿ ಕಳೆ ಕೀಳುವ ಯಂತ್ರ), ಅಕ್ಕೂರಿನ ಜಿ.ಎಂ.ಪಿ.ಶಾಲೆಯ ಆರ್‌.ಮದನಕುಮಾರ್‌ (ಸುರಕ್ಷಿತ ವಿದ್ಯುತ್‌ ಪೂರೈಕೆ), ಅಂಬಡಹಳ್ಳಿಯ ಜಿ.ಯು.ಎಚ್‌.ಪಿ.ಎಸ್‌.ನ ಕಾವ್ಯಾ (ಬೆಳಕು), ರಾಮನಗರದ ಶರತ್‌ ಪ್ರೌಢಶಾಲೆಯ ಎಸ್‌.ದಕ್ಷತಾ (ಮಿತ ವಿದ್ಯುತ್‌ ಬಳಸುವ ಬೀದಿ ದೀಪ), ಹೆಗ್ಗಡಹಳ್ಳಿಯ ಜಿ.ಎಚ್‌.ಪಿ.ಎಸ್‌.ನ ಎಚ್‌. ವಿ.ರಿತೇಶ್ (ಜಿ.ಎಸ್.ಎಂ ಆಧಾರಿತ ಅಪಘಾತ ಪತ್ತೆ ಯಂತ್ರ), ಸೂನಗಾನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಸಂತೋಷ್‌ ಗೌಡ (ನೈಸರ್ಗಿಕ ಸಂಪತ್ತು ರಕ್ಷಣೆ), ಮಂಡ್ಯದ ಗೌಸಿಯಾ ಬಾಲಕಿಯರ ಪ್ರೌಢಶಾಲೆಯ ಪವಿತ್ರಾ (ಸೌರಶಕ್ತಿ), ಪಾಂಡವಪುರ ತಾಲ್ಲೂಕಿನ ಹಿರೇಮರಳಿಯ ಸರ್ಕಾರಿ ಪ್ರೌಢ ಶಾಲೆಯ ಎಚ್‌.ಎಸ್‌.ಕಿರಣ್‌ ಕುಮಾರ್‌ (ರಸಾಯನಿಕ ಆಧಾರಿತ ಕೀಟನಾಶಕ), ಮದ್ದೂರು ತಾಲ್ಲೂಕು ಶಿವಾರಗುಡ್ಡದ ಜವಾಹರ ನವೋದಯ ವಿದ್ಯಾಲಯದ ಯಶಸ್.ಡಿ. ಗೌಡ (ಸೌರಶಕ್ತಿ ಬಳಕೆ), ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಸರ್ಕಾರಿ ಪ್ರೌಢಶಾಲೆಯ ಬಿ.ರಂಜಿತಾ (ಏತ ನೀರಾವರಿ), ನಾಗಮಂಗಲ ತಾಲ್ಲೂಕು ಹೊಸಕ್ಕಿ ಪಾಳ್ಯದ ಸರ್ಕಾರಿ ಪ್ರೌಢಶಾಲೆಯ ಎಚ್‌.ಎಸ್‌. ಮಂಜುನಾಥ (ಪವನ ವಿದ್ಯುತ್‌ ಅನ್ನು ಎಲೆಕ್ಟ್ರಿಕಲ್‌ ಮತ್ತು ಮೆಕ್ಯಾನಿಕಲ್‌ ವಿದ್ಯುತ್‌ ಆಗಿ ಪರಿವರ್ತಿಸುವುದು).

ಚಿತ್ರದುರ್ಗದ ಕಬೀರಾನಂದ ಪ್ರೌಢಶಾಲೆಯ ಪಿ.ಶಿವರಾಜ್‌ (ವಿದ್ಯುತ್‌ ಸಂರಕ್ಷಣೆ), ಮೊಳಕಾಲ್ಮುರು ಸರ್ಕಾರಿ ಪ್ರೌಢಶಾಲೆಯ ಮಹಮದ್‌ ಸೋಯೆಬ್‌ (ಪವನ ಯಂತ್ರದ ಮೂಲಕ ನೀರೆತ್ತುವುದು), ಚಳ್ಳಕೆರೆ ವಾಸವಿ ಇಂಗ್ಲಿಷ್‌ ಶಾಲೆಯ ಎಸ್.ಪವನ್‌ (ಚರಂಡಿ ನೀರಿನ ಮೂಲಕ ವಿದ್ಯುತ್ ಉತ್ಪಾದನೆ), ಚಿತ್ರದುರ್ಗದ ವಾಸವಿ ಕಾಲೊನಿಯ ಸಹ್ಯಾದ್ರಿ ಕನ್ನಡ ಶಾಲೆಯ ಎಂ.ರಿತಿನ್‌ (ವಿದ್ಯುತ್‌ ಮತ್ತು ನೀರು), ಕೋನಸಾಗರದ ಕೆಎಂಎಚ್‌ಪಿಎಸ್‌ನ ಜೆ.ಶ್ವೇತಾ (ಕೃಷಿ ಉಪಕರಣಗಳಿಗಾಗಿ ವಿದ್ಯುತ್‌ ಉತ್ಪಾದನೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.