ADVERTISEMENT

ರುದ್ರಭೂಮಿ ನಿರ್ಮಿಸಿದ ನಿಟ್ಟೂರು ಗ್ರಾಮಸ್ಥರು!

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 19:47 IST
Last Updated 22 ಜನವರಿ 2016, 19:47 IST
ಹೊಸನಗರ ತಾಲ್ಲೂಕು ನಿಟ್ಟೂರು ವ್ಯಾಪ್ತಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿದ ಹಿಂದೂ ರುದ್ರಭೂಮಿಯಲ್ಲಿನ ಶೆಡ್
ಹೊಸನಗರ ತಾಲ್ಲೂಕು ನಿಟ್ಟೂರು ವ್ಯಾಪ್ತಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿದ ಹಿಂದೂ ರುದ್ರಭೂಮಿಯಲ್ಲಿನ ಶೆಡ್   

ಹೊಸನಗರ: ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿ ಕೊರತೆ ಕಾರಣ ಎಲ್ಲೆಂದರಲ್ಲಿ ಶವಗಳ ಅಂತ್ಯಸಂಸ್ಕಾರ ನಡೆಸಬೇಕಾದ ಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿಗ್ರಾಮ ಪಂಚಾಯ್ತಿಯ ಸಹಕಾರದೊಂದಿಗೆ ಗ್ರಾಮಸ್ಥರೇ ಹಣ ಕ್ರೋಡೀಕರಿಸಿ ಶುಕ್ರವಾರ ರುದ್ರಭೂಮಿಯಲ್ಲಿ ಶೆಡ್‌ ನಿರ್ಮಿಸಿದರು.

ಗ್ರಾಮ ಪಂಚಾಯ್ತಿ ಕಚೇರಿಯಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ 298 ಸರ್ವೆ ನಂಬರಿನಲ್ಲಿ ಜಾಗ ಸಮತಟ್ಟು ಮಾಡಿ, ಶವ ಸುಡಲು ಶೆಡ್ ನಿರ್ಮಾಣ ಮಾಡುವುದರ ಮೂಲಕ ಗ್ರಾಮಸ್ಥರು ಸ್ಮಶಾನದ ವ್ಯವಸ್ಥೆ ಮಾಡಿಕೊಂಡರು.

ಗ್ರಾಮ ಪಂಚಾಯ್ತಿ ಸದಸ್ಯ ರಾಜೇಂದ್ರ ಶೆಟ್ಟಿ ಮಾತನಾಡಿ, ‘ಗ್ರಾಮದಲ್ಲಿ ರುದ್ರಭೂಮಿಯ ಅಗತ್ಯವಿತ್ತು. ಸ್ಮಶಾನ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹಣ ಹಾಕಿಕೊಂಡು ರುದ್ರಭೂಮಿ ನಿರ್ಮಿಸಲು ಪಣತೊಟ್ಟರು’ ಎಂದು ಹೇಳಿದರು.

ನಿಟ್ಟೂರು ಗ್ರಾಮದ ಪ್ರಮುಖರಾದ ಪ್ರಮುಖರಾದ ಪ್ರಶಾಂತ್, ಅಶೋಕ ಕುಂಬ್ಳೆ, ಮಂಜುನಾಥ್, ಸಂತೋಷ ರಾವ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.