ADVERTISEMENT

ರೇಣುಕಾ ಪರಮೇಶ್ವರಿ ಸಿಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಧರ್ಮಪುರ: ಸಮೀಪದ ಪ್ರಸಿದ್ಧ ಶ್ರೀರೇಣುಕಾ ಪರಮೇಶ್ವರಿ ಜಾತ್ರಾ ಉತ್ಸವದ ಅಂಗವಾಗಿ ಸಿಡಿ ಕಾರ್ಯ­ಕ್ರಮ ಮಂಗಳವಾರ ನೆರವೇರಿತು.

ಪ್ರತಿವರ್ಷ ಮಾರ್ಚ್‌ನಲ್ಲಿ ನಡೆ­ಯುವ ಈ ಜಾತ್ರಾ ಮಹೋತ್ಸವದ ವೇಳೆ  ರಥೋತ್ಸವ, ಅಗ್ನಿಕುಂಡ ಮತ್ತು ಸಿಡಿ ಕಾರ್ಯಕ್ರಮಗಳು ನಡೆಯುತ್ತವೆ.

ಅಗ್ನಿಕುಂಡದ ದಿನ ಪೂಜಾರಿ ಅದ­ರಲ್ಲಿನ ಕೆಂಡವನ್ನು ಸೀರೆಯಲ್ಲಿ ಕಟ್ಟಿ ದೇವಿಗೆ ಉಡಿಸುತ್ತಾರೆ. ನಂತರ ಮತ್ತೆ ಜಾತ್ರೆಯ ಸಂದರ್ಭದಲ್ಲಿ ಅದೇ ಕೆಂಡದಿಂದ ಅಗ್ನಿಕುಂಡ ಹೊತ್ತಿಸು­ತ್ತಾರೆ. ಯಾವುದೇ ಕಾರಣಕ್ಕೂ ಸೀರೆ ಸುಡು­ವು­ದಿಲ್ಲ ಮತ್ತು ಸೀರೆಯಲ್ಲಿನ ಕೆಂಡ ಆರುವುದಿಲ್ಲವೆಂಬ ನಂಬಿಕೆ ಮತ್ತು ಪ್ರತೀತಿ ಇಂದಿಗೂ ನಡೆದು­ಕೊಂಡು ಬಂದಿದೆ.

ಸಿಡಿಯ ದಿನ ಬೆನ್ನಿನ ಚರ್ಮಕ್ಕೆ ಕೊಂಡಿ ಹಾಕಿಸಿಕೊಂಡು ಸಿಡಿ ಮರ ಹೇರು­ವುದು ಭಕ್ತರ ಹರಕೆ­ಯಾಗಿರುತ್ತದೆ. ಸಾವಿರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.