ADVERTISEMENT

ರೈಲಿಗೆ ಸಿಗ್ನಲ್‌ ಕೊಡದೆ ನಿದ್ರಿಸಿದ ಗಾರ್ಡ್‌!

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

ಬೆಳಗಾವಿ: ಗಾರ್ಡ್‌ನಿಂದ ಹಸಿರು ನಿಶಾನೆ ದೊರೆಯದ ಕಾರಣ ರೈಲೊಂದು 10 ನಿಮಿಷ ನಿಂತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ರೈಲಿಗೆ ಹೋಗಲು 10 ನಿಮಿಷವಾದರೂ ಸಿಗ್ನಲ್‌ ದೊರೆಯದ ಕಾರಣ ಅನುಮಾನಗೊಂಡ ಚಾಲಕ, ಕೆಳಗಿಳಿದು ಹೋಗಿ ಗಾರ್ಡ್‌ ಹುಡುಕಿದ್ದಾರೆ. ಕರ್ತವ್ಯದಲ್ಲಿದ್ದ ಗಾರ್ಡ್‌ ಕೊಠಡಿಯ ಬಾಗಿಲು ತೆರೆಯದ ಕಾರಣ ಮತ್ತೊಬ್ಬ ಗಾರ್ಡ್‌ಗೆ ವಿಷಯ ತಿಳಿಸಿ ಹೋಗಿದ್ದಾರೆ’ ಎಂದು ನಿಲ್ದಾಣ ವ್ಯವಸ್ಥಾಪಕ ಎಸ್‌. ಸುರೇಶ್‌ ’ಪ್ರಜಾವಾಣಿ’ ತಿಳಿಸಿದರು.

‘ಇಲ್ಲಿನ 2ನೇ ರೈಲ್ವೆ ಗೇಟ್‌ನಲ್ಲಿ ಶನಿವಾರ ತಡರಾತ್ರಿ ನಿಜಾಮುದ್ದೀನ್‌ ರೈಲಿಗೆ ಸಿಗ್ನಲ್‌ ತೋರದೆ ಗಾರ್ಡ್‌ ಬಸವರಾಜ ಮೋದಗಿ ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಂದರು.

ADVERTISEMENT

‘ರಾತ್ರಿ ಕರ್ತವ್ಯದಲ್ಲಿದ್ದ ಗಾರ್ಡ್‌ ಮದ್ಯಪಾನ ಮಾಡಿ, ನಿದ್ರಿಸುತ್ತಿದ್ದರು ಎನ್ನಲಾಗಿದೆ. ಎಂಜಿನಿಯರಿಂಗ್‌ ವಿಭಾಗದಿಂದ ಗಾರ್ಡ್‌ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ರೈಲು ಸಿಗ್ನಲ್‌ಗಾಗಿ ಕಾಯುತ್ತಾ ನಿಂತಿದ್ದುದ್ದನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.