ADVERTISEMENT

ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ: ಮೂವರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 17:55 IST
Last Updated 14 ಫೆಬ್ರುವರಿ 2011, 17:55 IST

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು 2010ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ರಾಯಚೂರಿನ ಹೀರಾಲಾಲ್ ಮಲ್ಕಾರಿ, ವಿಜಾಪುರದ ಪಿ.ಎಸ್.ಕಡೇಮನಿ ಹಾಗೂ ನಗರದ ಸುಧಾ ವೆಂಕಟೇಶ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲಾ ಬಹುಮಾನಕ್ಕಾಗಿ ‘ಪ್ರಜಾವಾಣಿ’ಯ ಕಲಾವಿದ ಶಿವು ವಿ.ಹೂಗಾರ, ಬಸವರಾಜ ವಿ.ಕ. ಮಾಜಿ, ಕಾಶಿನಾಥ ವಿ.ಪತ್ತಾರ, ಅನಿಲ್ ಎಸ್.ಇಜೇರಿ, ಉದಯ ಡಿ.ಜೈನ್, ಎಚ್.ಮಂಜುನಾಥ್, ಟಿ.ಎಸ್.ಪ್ರತಿಭಾ, ಬಿ.ಎಚ್. ಲೋಕೇಶ್, ಸಂತೋಷ್ ಅಂಬರಕರ್, ಬಿ.ಎಸ್.ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಡಾ.ಜೆ.ಎಸ್. ಖಂಡೇರಾವ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.