ADVERTISEMENT

ವನ್ಯಜೀವಿ ಸಂರಕ್ಷಣೆ: ಚಂದ್ರಕಾಂತ ನಾಯ್ಕ್‌ಗೆ ‘ಆರ್‌ಬಿಎಸ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ವನ್ಯಜೀವಿ ಸಂರಕ್ಷಣೆ: ಚಂದ್ರಕಾಂತ ನಾಯ್ಕ್‌ಗೆ ‘ಆರ್‌ಬಿಎಸ್‌’ ಪ್ರಶಸ್ತಿ
ವನ್ಯಜೀವಿ ಸಂರಕ್ಷಣೆ: ಚಂದ್ರಕಾಂತ ನಾಯ್ಕ್‌ಗೆ ‘ಆರ್‌ಬಿಎಸ್‌’ ಪ್ರಶಸ್ತಿ   

ಬೆಂಗಳೂರು: ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ರಾಯಲ್‌ ಬ್ಯಾಂಕ್‌ ಆಫ್‌ ಸ್ಕಾಟ್ಲೆಂಡ್‌ (ಆರ್‌ಬಿಎಸ್‌) ನೀಡುವ ‘ಆರ್‌ಬಿಎಸ್‌ ಅರ್ಥ್‌ ಹೀರೋಸ್‌’ ಪ್ರಶಸ್ತಿಗೆ ಉತ್ತರ ಕನ್ನಡದ ಕಾಳಿ ಹುಲಿ ಅಭಯಾರಣ್ಯದ ಉಪ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ್ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿ ₹2 ಲಕ್ಷ ನಗದು ಒಳಗೊಂಡಿದೆ. ನವದೆಹಲಿಯಲ್ಲಿ ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕುಳಗಿ, ಕುಂಬಾರವಾಡಾ ವನ್ಯಜೀವಿ ವಲಯದಲ್ಲಿ ಕಳ್ಳಬೇಟೆ ಹಾಗೂ ಮರದ ಮಾಫಿಯಾಕ್ಕೆ ಅವರು ಕಡಿವಾಣ ಹಾಕಿದ್ದರು. ಚಿಮ್ಮುವ ಕಪ್ಪೆಯ ಹೊಸ ಪ್ರಭೇದವು ಕುಮಟಾ ತಾಲ್ಲೂಕಿನ ಸಾಣಿಕಟ್ಟದಲ್ಲಿ 2015ರಲ್ಲಿ ಬಾರಿ ಕಂಡುಬಂದಿತ್ತು. ಇದರ ಪತ್ತೆಯಲ್ಲಿ ನಾಯ್ಕ್ ಅವರು ಮಹತ್ತರ ಪಾತ್ರ ವಹಿಸಿದ್ದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.