ಬೆಂಗಳೂರು: ಕವಿ ಆರ್. ವಿಜಯರಾಘವನ್ ಮತ್ತು ಕವಯತ್ರಿ ಅಕ್ಷತಾ ಹುಂಚದಕಟ್ಟೆ ಅವರಿಗೆ 2015ರ ಡಾ.ಪು.ತಿ.ನ. ಕಾವ್ಯ ಪುರಸ್ಕಾರ ಲಭಿಸಿದೆ.
ವಿಜಯರಾಘವನ್ ಅವರ ‘ಅನುಸಂಧಾನ’ ಕವನ ಸಂಕಲನಕ್ಕೆ ಹಾಗೂ ಅಕ್ಷತಾ ಅವರ ‘ನೀರಮೇಲಣ ಗುಳ್ಳೆ’ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ₹ 25 ಸಾವಿರ ಮೊತ್ತವನ್ನೊಳಗೊಂಡಿದೆ ಎಂದು ಡಾ.ಪು.ತಿ.ನ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ವಿಜಯರಾಘವನ್ ವಿಮರ್ಶಕರಾಗಿ, ಅನುವಾದಕರಾಗಿಯೂ ಪ್ರಸಿದ್ಧರು. ಅಕ್ಷತಾ ತಮ್ಮ ‘ಅರ್ಹನಿಶಿ’ ಪ್ರಕಾಶನದ ಮೂಲಕ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.