ADVERTISEMENT

ವಿಜ್ಞಾನದ ಅರಿವಿಗೆ ವಿಜ್ಞಾನ ಜನೋತ್ಸವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 20:17 IST
Last Updated 18 ಡಿಸೆಂಬರ್ 2013, 20:17 IST

ಬೆಂಗಳೂರು: ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಮತ್ತು ಕೆಎಲ್ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜು ಜಂಟಿಯಾಗಿ ಜ.17-ರಿಂದ 19 ರವರೆಗೆ ಮೂರು ದಿನಗಳ ವಿಜ್ಞಾನ ಜನೋತ್ಸವವನ್ನು  ಆಯೋಜಿಸಿದೆ.

ವಿಜ್ಞಾನದಲ್ಲಿನ ವಿನೋದ ಮತ್ತು ವೈಜ್ಞಾನಿಕ ದೃಷ್ಟಿಕೋನದ ಮಹತ್ವ, ಸುಲಭ ವಾಗಿ ದೊರೆಯುವ ಮತ್ತು ಸರಳ ವಸ್ತುಗಳ ಬಳಕೆ,  ಚಟುವಟಿಕೆಗಳ ಮೂಲಕ ವಿಜ್ಞಾನವನ್ನು ಕಲಿಯುವ-ಕಲಿಸುವ ವಿಧಾನಗಳನ್ನು ಕಾರ್ಯಕ್ರಮದಲ್ಲಿ ಪರಿಚಯಿಸಲಾಗುವುದು. ಜನಸಾಮಾನ್ಯರಲ್ಲಿ ವಿಜ್ಞಾನದ ವಿಚಾರಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿನ ವಿಜ್ಞಾನದ ಪ್ರತಿಭೆಯನ್ನು ಬೆಳಕಿಗೆ ತರುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಡಿ.21 ಮತ್ತು 22 ರಂದು ರಾಜಾಜಿನಗರ ಎರಡನೇ ಹಂತದ ನಿಜಲಿಂಗಪ್ಪ ಕಾಲೇಜು ಆವರಣಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ,  ಚಿತ್ರಪಟ ವಿನ್ಯಾಸ, ಕೊಲಾಜ್‌, ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

ಮಾಹಿತಿಗೆ: 95352 46513 / 94482 66718 / 96110 49000.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.