ಬೆಂಗಳೂರು: ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಿರಂತರ ವಿದ್ಯುತ್ ಖರೀದಿಗೆ ಬಜೆಟ್‌ನಲ್ಲಿ ಒತ್ತು ನೀಡಿದ್ದು, ಇಂಧನ ಇಲಾಖೆಗೆ 1,766 ಕೋಟಿ ರೂಪಾಯಿ ಹೆಚ್ಚಿನ ಅನುದಾನ ಒದಗಿಸಲಾಗಿದೆ.
ಕಳೆದ ವರ್ಷ ಇಂಧನ ಇಲಾಖೆಗೆ ರೂ 8,523 ಕೋಟಿ ನಿಗದಿ ಮಾಡಲಾಗಿತ್ತು. 2012-13ರ ಬಜೆಟ್‌ನಲ್ಲಿ ರೂ 10,289 ಕೋಟಿ ಒದಗಿಸಲಾಗಿದೆ. ವಿದ್ಯತ್ ಬೇಡಿಕೆಯಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದು ಮತ್ತು ಖರೀದಿ, ಪೂರೈಕೆಯಲ್ಲಿ ಇರುವ ಸಮಸ್ಯೆಗಳ ಕುರಿತು ಹೆಚ್ಚಿನ ವಿವರವನ್ನೂ ನೀಡಲಾಗಿದೆ.
ಹತ್ತು ಅಶ್ವಶಕ್ತಿವರೆಗಿನ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಮುಂದುವರಿಸಲಾಗಿದೆ. ಇದಕ್ಕಾಗಿ ಕೃಷಿ ಬಜೆಟ್‌ನಲ್ಲಿ 4,600 ಕೋಟಿ ರೂಪಾಯಿ ಸಹಾಯ ಧನ ಒದಗಿಸಲಾಗಿದೆ.
-ರೂ 610 ಕೋಟಿ ವೆಚ್ಚದಲ್ಲಿ ಸಂಂಯೋಜಿತ ಪ್ರಸರಣ ಮಾರ್ಗಗಳ ಸ್ಥಾಪನೆ, 83 ಹೊಸ ಉಪ ಕೇಂದ್ರಗಳ ನಿರ್ಮಾಣ ಮತ್ತು ಈಗಾಗಲೇ ಇರುವ 117 ಕೇಂದ್ರಗಳ ಸಾಮರ್ಥ್ಯ ಹೆಚ್ಚಳ.
-5,000 ಕುಡಿಯುವ ನೀರು ಸರಬರಾಜು ಸ್ಥಾವರಗಳು ಮತ್ತು 50,000 ನೀರಾವರಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವ ಗುರಿ.
-`ಹಸಿರು ಇಂಧನ ನಿಧಿ~ ಯೋಜನೆಯ ಅಡಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ಐದು ಪೈಸೆಯಂತೆ ಉಪಕರ. ಬಜೆಟ್‌ನಿಂದ ರೂ 25 ಕೋಟಿ ಪೂರಕ ನೆರವು.
-ಅಧಿಕ ಸಾಮರ್ಥ್ಯದ ಪಂಪ್‌ಗಳ ಅಳವಡಿಕೆ ಯೋಜನೆ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.