ADVERTISEMENT

ವಿದ್ಯುತ್ ದರ ಏರಿಕೆ: ಅಹವಾಲು ಸ್ವೀಕಾರ ಪೂರ್ಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಬೆಂಗಳೂರು: ವಿದ್ಯುತ್ ಬೆಲೆ ಹೆಚ್ಚಳ ಮಾಡುವಂತೆ ಕೋರಿ ವಿದ್ಯುತ್ ಸರಬರಾಜು ಕಂಪೆನಿಗಳು ಹಾಗೂ ಕೆಪಿಟಿಸಿಎಲ್ ಮುಂದಿಟ್ಟಿದ್ದ ಕೋರಿಕೆ ಕುರಿತು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಸಾರ್ವಜನಿಕರ ಅಹವಾಲು ಸ್ವೀಕರಿಸುವುದನ್ನು ಶುಕ್ರವಾರ ಪೂರ್ಣಗೊಳಿಸಿದೆ.

ಆಯೋಗದ ಎದುರು ಶುಕ್ರವಾರ ವಾದ ಮಂಡಿಸಿದ ಕೆಪಿಟಿಸಿಎಲ್ ಪ್ರತಿನಿಧಿಗಳು, ಪ್ರಸರಣ ವೆಚ್ಚವನ್ನು ಈಗಿರುವ 28 ಪೈಸೆಯಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 44 ಪೈಸೆಗೆ ಹೆಚ್ಚಳ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದರು.
ಅಹವಾಲು ಸ್ವೀಕಾರ ಮುಗಿದ ಎರಡು ವಾರಗಳಲ್ಲಿ ಆಯೋಗ ತನ್ನ ತೀರ್ಪು ನೀಡುತ್ತದೆ.

ಈ ಹಿನ್ನೆಲೆಯಲ್ಲಿ ವಿದ್ಯುತ್ ಬೆಲೆ ಹೆಚ್ಚಳ ಸಂಬಂಧ ಇದೇ ತಿಂಗಳ ಕೊನೆಯ ವಾರದ ವೇಳೆಗೆ ಆಯೋಗ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.