ADVERTISEMENT

ವಿಮಾನದ ಶೌಚಾಲಯದಲ್ಲಿ ಚಿನ್ನ ಪತ್ತೆ

ದುಬೈನಿಂದ ಸಂಘಟಿತ ಕಳ್ಳಸಾಗಣೆ ಜಾಲದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಮಂಗಳೂರಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಸುಕಿನ ಜಾವ ಬಂದಿಳಿದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನದ ಗಟ್ಟಿಗಳು.
ಮಂಗಳೂರಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ನಸುಕಿನ ಜಾವ ಬಂದಿಳಿದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿರುವ ಚಿನ್ನದ ಗಟ್ಟಿಗಳು.   

ಮಂಗಳೂರು: ಮೊದಲು ದುಬೈನಿಂದ ಮುಂಬೈಗೆ ಬಂದಿದ್ದ ವಿಮಾನದ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಟ್ಟು ಮಂಗಳೂರಿಗೆ ಸಾಗಿಸುವ ಪ್ರಯತ್ನವೊಂದನ್ನು ವಿಫಲಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ₹ 66.67 ಲಕ್ಷ ಮೌಲ್ಯದ 2.11 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆಗೆ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಗುರುವಾರ ನಸುಕಿನ ಜಾವ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ಡಿಆರ್‌ಐ ಅಧಿಕಾರಿಗಳ ತಂಡ ಶೋಧ ಆರಂಭಿಸಿತ್ತು. ಮುಂಬೈನಿಂದ ಬಂದ ಸ್ಪೈಸ್‌ ಜೆಟ್‌ ಎಸ್‌ಜಿ 479 ಸಂಖ್ಯೆಯ ವಿಮಾನದಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಅದರ ಶೌಚಾಲಯದ ಮೇಲಿನ ಚಾವಣಿಯ ಒಳಗೆ ಆಮ್ಲಜನಕ ಕವಚ ಇರಿಸಿದ್ದ ಪ್ಯಾನೆಲ್‌ ಒಳಗೆ ಚಿನ್ನ ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT