ADVERTISEMENT

ವಿಷು ಸ್ಪರ್ಧೆ: ಬರಹಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉತ್ತರಕನ್ನಡ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಹವ್ಯಕ ಭಾಷೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನವು (ರಿ) ಇದೇ ಮೊದಲ ಬಾರಿಗೆ ಈ ವರ್ಷ ರಾಜ್ಯ ಮಟ್ಟದ `ವಿಷು ವಿಶೇಷ ಸ್ಪರ್ಧೆ-2012~ ಆಯೋಜಿಸಿದೆ.

ಕಥೆ,  ಪ್ರಬಂಧ, ಛಾಯಾಚಿತ್ರ, ಲಘುಬರಹ ಮತ್ತು ಕವಿತೆ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಬರಹಗಳನ್ನು ಕಳುಹಿಸಲು ಏಪ್ರಿಲ್ 4 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ  www.oppanna.com ಮತ್ತು ದೂರವಾಣಿ ಸಂಖ್ಯೆ 9448472292, 9448360344 ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.