ADVERTISEMENT

ಶತಾಯುಷಿ ಶಾಂತಮ್ಮರಿಂದ ಈವರೆಗೂ 50ಕ್ಕೂ ಹೆಚ್ಚು ಬಾರಿ ಮತದಾನ

​ಪ್ರಜಾವಾಣಿ ವಾರ್ತೆ
Published 12 ಮೇ 2018, 10:31 IST
Last Updated 12 ಮೇ 2018, 10:31 IST
ಶತಾಯುಷಿ ಶಾಂತಮ್ಮ
ಶತಾಯುಷಿ ಶಾಂತಮ್ಮ   

ಸಾಗರಪೇಟೆ(ದಾವಣಗೆರೆ): ಸಮೀಪದ ಸಾಗರಪೇಟೆ ಗ್ರಾಮದ ಕರಿಬಸಪ್ಪಗೌಡರ ಪತ್ನಿ 105 ವರ್ಷದ ಶತಾಯುಷಿ ಶಾಂತಮ್ಮ ಶನಿವಾರ ನಡೆಯುತ್ತಿರುವ ಚುನಾವಣೆಯಲ್ಲಿ ಲವಲವಿಕೆಯಿಂದ ಮತದಾನ ಮಾಡಿದರು. 

ಇವರು ಮತದಾನಕ್ಕೆ ಅರ್ಹತೆ ಪಡೆದ ನಂತರ ನಡೆದ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಸುಮಾರು 50ಕ್ಕೂ ಹೆಚ್ವು ಚುನಾವಣೆಗಳಲ್ಲಿ ತಪ್ಪದೇ ಮತ ಚಲಾಯಿಸುತ್ತಾ ಬಂದಿದ್ದಾರಂತೆ.  ಮತದಾನದ ಮಹತ್ವದ ಬಗ್ಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳಿಗೆ ತಿಳಿಹೇಳುತ್ತ ಮಾದರಿಯಾಗಿದ್ದಾರೆ. 

‘ಚುನಾವಣೆಯ ದಿನ ಮುಂಜಾನೆಯೇ ಸಿದ್ಧರಾಗಿ, ಮತದಾನ ಮಾಡುವ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು, ಮತಗಟ್ಟೆಗೆ ಹೋಗಿ ಯಾರ ಸಹಾಯವೂ ಇಲ್ಲದೇ ಅಮ್ಮ ವೋಟುಹಾಕಿ ಬರುತ್ತಾರೆ’ ಎಂದು ಅವರ ಮಗ ಬಿ.ಜಿ.ರುದ್ರೇಶ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.