ADVERTISEMENT

ಶಾಸಕರ ಸರಾಸರಿ ಆಸ್ತಿ ₹17 ಕೋಟಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ವಿಧಾನಸಭೆಗೆ ಪುನರಾಯ್ಕೆ ಬಯಸಿರುವ 184 ಶಾಸಕರ ಆಸ್ತಿ ₹17.31 ಕೋಟಿ ಹೆಚ್ಚಾಗಿದೆ. 2013ರಲ್ಲಿ ಇದ್ದ ಸರಾಸರಿ ಸಂಪತ್ತು ಪ್ರಮಾಣ ₹26.92 ಕೋಟಿಯಿಂದ ₹44.24 ಕೋಟಿಗೆ ಏರಿದೆ.

ಈ ಸಾಲಿನ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಲಗತ್ತಿಸಿದ ಅಫಿಡವಿತ್‌ ಆಧಾರದಲ್ಲಿ ‘ಕರ್ನಾಟಕ ಎಲೆಕ್ಷನ್‌ ವಾಚ್‌’ ಹಾಗೂ ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ ಸಂಸ್ಥೆ’ ಈ ವಿಶ್ಲೇಷಣೆ ನಡೆಸಿದೆ. ಶಾಸಕರ ಸಂಪತ್ತಿನಲ್ಲಿ ಶೇ 64ರಷ್ಟು ಹೆಚ್ಚಾಗಿದೆ ಎಂದೂ ಹೇಳಿದೆ.

ಆಸ್ತಿ ಜಿಗಿಜಿಗಿತ: ಹುನಗುಂದದ ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್‌) ಶೇ 862, ಚಿಕ್ಕಬಳ್ಳಾಪುರದ ಡಾ.ಕೆ. ಸುಧಾಕರ್‌ (ಕಾಂಗ್ರೆಸ್‌) ಶೇ 572, ರಾಣೆಬೆನ್ನೂರಿನ ಕೆ.ಬಿ.ಕೋಳಿವಾಡ (ಕಾಂಗ್ರೆಸ್‌) ಶೇ 542, ಮಾಲೂರಿನ ಕೆ.ಎಸ್‌.ಮಂಜುನಾಥ ಗೌಡ (ಜೆಡಿಎಸ್‌) ಶೇ 528, ಚಿತ್ರದುರ್ಗದ ಜಿ.ಎಚ್‌.ತಿಪ್ಪಾರೆಡ್ಡಿ (ಬಿಜೆಪಿ) ಶೇ 418, ಗೌರಿಬಿದನೂರಿನ ಎನ್‌.ಎಚ್‌.ಶಿವಶಂಕರ ರೆಡ್ಡಿ (ಕಾಂಗ್ರೆಸ್‌) ಶೇ 392, ಚಳ್ಳಕೆರೆಯ ಟಿ.ರಘುಮೂರ್ತಿ (ಕಾಂಗ್ರೆಸ್) ಶೇ 377, ಶಿರಹಟ್ಟಿಯ ರಾಮಕೃಷ್ಣ ದೊಡ್ಡಮನಿ (ಕಾಂಗ್ರೆಸ್‌) ಶೇ 330, ಯಲಬುರ್ಗಾದ ಬಸವರಾಜ ರಾಯರಡ್ಡಿ (ಕಾಂಗ್ರೆಸ್‌) ಶೇ 275, ಹುಮನಾಬಾದ್‌ನ ರಾಜಶೇಖರ ಪಾಟೀಲ (ಕಾಂಗ್ರೆಸ್) ಶೇ 246, ಮದ್ದೂರಿನ ಡಿ.ಸಿ. ತಮ್ಮಣ್ಣ (ಜೆಡಿಎಸ್‌) ಶೇ 245, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ (ಕಾಂಗ್ರೆಸ್‌) ಶೇ 234, ಆಳಂದದ ಬಿ.ಆರ್‌.ಪಾಟೀಲ (ಕೆಜೆಪಿಯಿಂದ ಕಾಂಗ್ರೆಸ್‌ಗೆ ಸೇರಿರುವ) ಶೇ 220, ಶಿವಮೊಗ್ಗ
ಗ್ರಾಮಾಂತರದ ಶಾರದಾ ಪೂರ್ಯಾನಾಯ್ಕ್ (ಜೆಡಿಎಸ್‌) ಆಸ್ತಿ ಶೇ 213 ಪಟ್ಟು ಹೆಚ್ಚಾಗಿದೆ.

ADVERTISEMENT

ಕುಸಿಯಿತು ಸಂಪತ್ತು: 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಬಳಿಕ ಸಂಸದರಾದ ಬಿ.ಎಸ್‌.ಯಡಿಯೂರಪ್ಪ, ಬಿ.ಶ್ರೀರಾಮುಲು, ಶಾಸಕರಾದ ವೈ.ಎಸ್‌.ವಿ. ದತ್ತಾ, ಅಶೋಕ ಪಟ್ಟಣ, ಎಂ. ರಾಜಣ್ಣ, ಮಂಕಾಳ ವೈದ್ಯ, ಎಚ್‌.ಎಸ್‌.ಪ್ರಕಾಶ್‌, ಎಂ.ಕೃಷ್ಣಾ ರೆಡ್ಡಿ,  ಈ.ತುಕಾರಾಂ, ಎಂ.ಪಿ. ಅಪ್ಪಚ್ಚು ರಂಜನ್‌, ಬಿ.ಸುರೇಶ್‌ ಗೌಡ, ಶಿವರಾಮ್‌ ಹೆಬ್ಬಾರ್‌, ಪ್ರಭು ಚವ್ಹಾಣ್‌, ಸತೀಶ್‌ ಸೈಲ್‌, ಅಖಂಡ ಶ್ರೀನಿವಾಸಮೂರ್ತಿ, ಪ್ರಮೋದ್‌ ಮಧ್ವರಾಜ್‌,  ಸತೀಶ್‌ ಜಾರಕಿಹೊಳಿ ಅವರ ಸಂಪತ್ತು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.