ADVERTISEMENT

ಶಿರಾ: ನಿಂತಿದ್ದ ಲಾರಿಗೆ ಯಾತ್ರಿಕರಿದ್ದ ಬಸ್ ಡಿಕ್ಕಿ, 8 ಜನರ ಸಾವು

ಸಿಗಂಧೂರಿನಿಂದ ಮರಳುತ್ತಿದ್ದ ಬಸ್‌

​ಪ್ರಜಾವಾಣಿ ವಾರ್ತೆ
Published 21 ಮೇ 2018, 4:15 IST
Last Updated 21 ಮೇ 2018, 4:15 IST
ಅಪಘಾತದಿಂದಾಗಿ ಬಸ್‌ ನಜ್ಜುಗುಜ್ಜಾಗಿದೆ
ಅಪಘಾತದಿಂದಾಗಿ ಬಸ್‌ ನಜ್ಜುಗುಜ್ಜಾಗಿದೆ   

ಶಿರಾ(ತುಮಕೂರು): ಶಿರಾ ನಗರದಿಂದ ಮೂರು ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48 ರ ಜೈ ಹಿಂದ್ ಡಾಬಾ ಬಳಿ ನಿಂತಿದ್ದ ಲಾರಿಗೆ ಯಾತ್ರಿಗಳಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು 8 ಮಂದಿ ಮೃತಪಟ್ಟಿದ್ದಾರೆ.

ಹೆದ್ದಾರಿ ಎಡ ಭಾಗದಲ್ಲಿ ನಿಂತಿದ್ದ ಲಾರಿಗೆ ಇಂಡಿಕೇಟರ್ ಹಾಕಿರಲಿಲ್ಲ. ಅತೀ ವೇಗದಲ್ಲಿ ಬಂದ ಹನುಮಾನ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಇದಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಸವಿತಾ ಸೋಮಶೇಖರ್(21), ಅನುಷಾ(7), ರತ್ನಮ್ಮ ಕುಮಾರ್ (39), ಸುಮಲತಾ ಲಿಂಗರಾಜು(21), ಗಿರಿಜಮ್ಮ ದೇವರಾಜು(55), ಶಿರಾ ಜ್ಯೋತಿನಗರದ ಶಂಕರ್ ಈಶ್ವರಪ್ಪ(38) ,ಅಶ್ವತ್ಥ್ ನಾರಾಯಣ (40) ಮೃತಪಟ್ಟಿದ್ದಾರೆ. 16 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಎಲ್ಲರೂ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ಮೇ 19ರಂದು ತೆರಳಿದ್ದರು. ಮೇ 20 ರಂದು ರಾತ್ರಿ ಹಿಂದಿರುಗಿ ಬರುತ್ತಿದ್ದರು. ಶಿರಾ ನಗರ ತಲುಪಲು 3 ಕಿ.ಮೀ  ದೂರ ಇದ್ದಾಗ ಅಪಘಾತ ಸಂಭವಿಸಿದೆ.

ಗಾಯಾಳುಗಳು : 1) ಭೂತಣ್ಣ, 2)ರಂಗಪ್ಪ 3)ಶಾಂತಮ್ಮ, 4)ಭಾರತಿ, 5) ಯಶೋಧರ, 6) ಅನ್ನಪೂಣೇ೯ಶ್ವರಿ, 7) ಜ್ಯೋತಿ, 8) ವೀರಭದ್ರಯ್ಯ, 9) ನಂಜಮ್ಮ, 10) ಪದ್ಮಮ್ಮ, 11) ಕೆಂಚಮ್ಮ 12) ಅಜೇಯ 13) ತಿಪ್ಪೇಸ್ವಾಮಿ 14) ನಾಗಮಣಿ 15) ರಂಗನಾಥ 16) ಸೋಮಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.