ADVERTISEMENT

ಶ್ರೀಕಂಠದತ್ತ ಒಡೆಯರ್‌ರಿಂದ ಸರಸ್ವತಿ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಖಾಸಗಿ ದರ್ಬಾರ್ ನಡೆಸುತ್ತಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸೋಮವಾರ ವಿಧಿ-ವಿಧಾನಗಳೊಂದಿಗೆ ಸರಸ್ವತಿ ಪೂಜೆ ನೆರವೇರಿಸಿದರು.

ನವರಾತ್ರಿಯಲ್ಲಿ ಸಪ್ತಮಿ ದಿನದಂದು ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳಲ್ಲಿ ಶಾರದಾ ಪೂಜೆಯೂ ಒಂದು. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿಗಳೊಂದಿಗೆ, ಭಕ್ತಿ ಭಾವದಿಂದ ದೇವಿಗೆ ಪೂಜೆ ಸಲ್ಲಿಸಿದರು.

ಬೆ. 9ರಿಂದ 10 ಗಂಟೆವರೆಗೆ ಸಲ್ಲುವ ಮೂಲಾ ನಕ್ಷತ್ರದಲ್ಲಿ ಮಡಿ ವಸ್ತ್ರಗಳನ್ನು ಧರಿಸಿ, ಭಕ್ತಿಯಿಂದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ 62 ಕಳಸಗಳನ್ನು ಸ್ಥಾಪಿಸಿ ಅದರ ಜೊತೆ ವೀಣೆ, ತಬಲ, ಗ್ರಂಥ, ತಾಳೆಗರಿ, ಪುಸ್ತಕಗಳಿಗೂ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಸ್ಥಾನ ಪಂಡಿತರು, ವಿದ್ವಾಂಸರು, ಅರಮನೆಯ ನೌಕರರು, ಭದ್ರತಾ ಸಿಬ್ಬಂದಿ ಹಾಜರಿದ್ದು ಸರಸ್ವತಿ ಪೂಜೆಗೆ ಮೆರಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT